ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾಮಿ ವಿವೇಕಾನಂದರ ಪರಿಕಲ್ಪನೆಯ ಜ್ಞಾನಗಳಿಕೆಯೇ ಶಿಕ್ಷಣದ ಉದ್ದೇಶವಾಗಿದ್ದು, ಶಿಕ್ಷಣವು ವಿದ್ಯಾರ್ಥಿಗಳನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯಬೇಕು ಎಂದು ಪೋದಾರ್‌ನ ಶಿಕ್ಷಕ ಸುಕೇಶ್ ಸೇರಿಗಾರ ಹೇಳಿದರು.
ಪೇಸ್ ಪಿ.ಯು ಕಾಲೇಜಿನಲ್ಲಿ #PACE PU College ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲೆಯ ವಿವಿಧ ಶಾಲೆಗಳಿಂದ ಆಯ್ದ ಉತ್ತಮ ಶಿಕ್ಷಕರುಗಳನ್ನು ಸನ್ಮಾನಿಸುವ “ಗುರು ವಂದನಾ” ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈಗ ಚೀನಾವು ಬಾಂಬ್ ಹಾಕುವುದರ ಬದಲಿಗೆ ಹೊಸ ಹೊಸ ಗೇಮಿಂಗ್ ಆಪ್‌ಗಳ ಮೂಲಕ ಲಕ್ಷಾಂತರ ಯುವಕರನ್ನು ಹಾಳು ಮಾಡುತ್ತಿದ್ದಾರೆ. ಅದರ ಗೀಳಿಗೆ ಬೀಳದೆ ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಮೆಕಾಲೆ ಶಿಕ್ಷಣ ಪದ್ಧತಿಗಿಂತಲೂ ಭಾರತೀಯ ಶಿಕ್ಷಣ ಪದ್ಧತಿಯೇ ಹೆಚ್ಚು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Also read: ವಾಲ್ಮೀಕಿ ಅಭಿವೃದ್ದಿ ನಿಗಮ ಪ್ರಕರಣ | ಮೃತ ಚಂದ್ರಶೇಖರ್ ಕುಟುಂಬಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಧನಸಹಾಯ
ಅನನ್ಯ ವಿದ್ಯಾಪೀಠದ ಶಿಕ್ಷಕ ಆರ್. ಗಿರೀಶ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಯಿ ಎಂದರೆ ಸತ್ಯ, ತಂದೆ ಎಂದರೆ ನಂಬಿಕೆ, ಗುರು ಎಂದರೆ ವಾಸ್ತವ. ಹಾಗಾಗಿ ಬದುಕಿನಲ್ಲಿ ತಾಯಿ, ತಂದೆ, ಗುರುಗಳನ್ನು ಗೌರವಿಸಬೇಕೆ ಹೊರತು ಅವರನ್ನು ಮೀರಿ ನಾನೇ ಶ್ರೇಷ್ಠ ಎಂಬ ಅಹಂಕಾರ ಬೆಳೆದಲ್ಲಿ ಕಲಿಕೆ ಮತ್ತು ಏಳ್ಗೆ ಕುಂಠಿತವಾಗುತ್ತದೆ. ಆದ್ದರಿಂದ ವಿನಯತೆಯನ್ನು ಬೆಳೆಸಿಕೊಳ್ಳುವುದೇ ಶಿಕ್ಷಣ ಅದನ್ನು ಪಡೆಯಿರಿ ಎಂದರು.
ಸಾಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ಶಿಕ್ಷಕಿ ವಿಜಯಲಕ್ಷಿಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳ ಉತ್ತಮ ಕಲಿಕೆಗೆ ಶಿಕ್ಷಕ ಅಗತ್ಯ. ಗುರಿ ತೋರುವ ಗುರುವೇ ಶ್ರೇಷ್ಠ. ಅಲ್ಲದೇ ಮುಂದಿನ ವೃತ್ತಿಪರ ಶಿಕ್ಷಣದ ಕೋರ್ಸ್ಗಳನ್ನು ನಿಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ದುಕೊಳ್ಳಿ. ಏಕೆಂದರೆ ಬದುಕಿನುದ್ದಕ್ಕೂ ಸಾಗಬೇಕಾಗಿರುವುದು ಅದರ ಜೊತೆಗೆ ಆದ್ದರಿಂದ ಆಯ್ಕೆ ಸರಿಯಾಗಿರಲಿ ಎಂದರು.
ನಿಸರಾಣಿಯ ವಿ. ಎಸ್. ಪ್ರೌಢಶಾಲೆಯ ಶಿಕ್ಷಕರಾದ ಲಕ್ಷ್ಮೀಶ ಟಿ. ಎಂ. ಅವರು ಸನ್ಮಾನ ಸ್ವೀಕರಿಸಿ ಮಕ್ಕಳು ಸಮಯ ಮಹತ್ವ ಅರಿತು ಅದನ್ನು ವ್ಯರ್ಥ ಮಾಡದೇ ಕಲಿಯಬೇಕೆಂದು ತಿಳಿಸಿದರು.
ಹಾಗೆಯೇ ಕಾರೇಹಳ್ಳಿಯ ಬಿ. ಜಿ. ಎಸ್ ಪ್ರೌಢಶಾಲೆ ಶ್ರೀವೀರರಾಜೇಂದ್ರ ಸ್ವಾಮಿ, ಹಾಗೂ ದೊಡ್ಡೇರಿಯ ಜ್ಞಾನವಾಹಿನಿ ಪ್ರೌಢಶಾಲೆಯ ಅಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಜ್ಞಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಎಸ್. ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ ಪ್ರೊ. ಹೆಚ್. ಆನಂದ್, ಕಾರ್ಯದರ್ಶಿಗಳೂ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿ. ಎನ್. ವಿಶ್ವನಾಥಯ್ಯನವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜ್ಞಾನಶ್ರೀ ಸ್ವಾಗತಿಸಿ, ಶ್ರೀಅರ್ಜುನ್ ವಂದಿಸಿದರು. ಡಾ. ಮೈತ್ರೇಯಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post