ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಸಂಚಾರಿ ವೃತ್ತ ಸಿಪಿಐ ಲತಾ ಬಿ.ಕೆ. ಅವರ ನೇತೃತ್ವದಲ್ಲಿ ಇಂದು ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಲಾಯಿತು.
ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ ದಾಖಲಾತಿಗಳಾದ ಆರ್.ಸಿ.(ನೋಂದಣ ಪ್ರಮಾಣ ಪತ್ರ), ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಿಮಾ ಪತ್ರ, ಡಿ.ಎಲ್(ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ ದಾಖಲಾತಿಗಳನ್ನು ಮತ್ತು ವಾಹನದಲ್ಲಿ ಪ್ರಥಮಾ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು.
ನಂತರ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡದೇ ಕಡ್ಡಾಯವಾಗಿ ವೇಗದ ಮಿತಿಯಲ್ಲಿಯೇ ವಾಹನಗಳನ್ನು ಚಾಲನೆ ಮಾಡುವಂತೆ ತಿಳಿಸಲಾಯಿತು.
Also read: ಭಾನುಪ್ರಕಾಶ್ ನಿಧನ | ಸಂಸದ ಬಿ.ವೈ. ರಾಘವೇಂದ್ರ ಸಂತಾಪ
ಚಾಲನೆಯ ವೇಳೆ ಮದ್ಯಪಾನ ಮಾಡಿ ವಾಹನ ಮಾಡದಂತೆ, ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಬಳಕೆ ಮಾಡದಂತೆ ಮತ್ತು ಶಾಲಾ ವಾಹನದಲ್ಲಿ ಲಭ್ಯವಿರುವ ಆಸನಗಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೂರಿಸಿಕೊಂಡು ಹೋದಗಂತೆ ಸೂಚನೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post