ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜನಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಶಾಮಾ ಪ್ರಸಾದ ಮುಖರ್ಜಿ ಅವರ ಜಯಂತಿ ಹಾಗೂ ಬಲಿದಾನ ದಿನದ ಅಂಗವಾಗಿ ಜೂನ್ 23 ರಿಂದ ಜುಲೈ 6 ರವರೆಗೆ ಬಿಜೆಪಿ ವತಿಯಿಂದ ದೇಶದಾದ್ಯಂತ ‘ವೃಕ್ಷಾರೋಪಣ ಅಭಿಯಾನ’ ಹಮ್ಮಿಕೊಂಡಿದೆ.

ಇದರ ಭಾಗವಾಗಿ ಇಂದು ಬಿಜೆಪಿ ಯುವಮೋರ್ಚಾ ಶಿವಮೊಗ್ಗ ಗ್ರಾಮಾಂತರ ಇವರ ವತಿಯಿಂದ ಹಾರನಹಳ್ಳಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಸೆವಾಹಿ ಸಂಘಟನ್ ಅಶಯದಲ್ಲಿ 50 ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಯುವಮೋರ್ಚಾ ಕಾರ್ಯಕರ್ತರು ಹಾಗೂ ಹಾರನಹಳ್ಳಿ ಮಹಾಶಕ್ತಿಕೇಂದ್ರದ ಪ್ರಮುಖರ ಸಮ್ಮುಖದಲ್ಲಿ ಯಶಸ್ವಿಗತವಾಗಿ ನೆಡೆಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















