ಶಿವಮೊಗ್ಗ: ಮಲೆನಾಡಿನ ಖ್ಯಾತ ಮನೋವೈದ್ಯೆ ಡಾ.ಶುಭ್ರತಾ ಅವರ ಸಾಧನೆಯ ಮುಡಿಗೆ ಮತ್ತೊಂದು ಗರಿ ಮೂಡಿದ್ದು, ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಮಾತ್ರವಾಗಿದ್ದಾರೆ.
ಇತ್ತೀಚೆಗೆ ಲಕ್ನೋದಲ್ಲಿ ನಡೆದ ನ್ಯಾಶನಲ್ ಸೈಕಿಯಾಟ್ರರಿ ಸೊಸೈಟಿ ಆಯೋಜಿಸಿದ್ದ 71ನೆಯ ರಾಷ್ಟ್ರೀಯ ವಿಚಾರ ಸಂಕಿರಣ-2019ರಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದ ಶುಭ್ರತಾ, ಈ ಮೂಲಕ ಶಿವಮೊಗ್ಗದ ಕೀರ್ತಿಪತಾಕೆಯನ್ನು ರಾಷ್ಟ್ರೀಯ ವೇದಿಕೆಯಲ್ಲಿ ಹಾರಿಸಿದ್ದಾರೆ.ಈ ರಾಷ್ಟ್ರೀಯ ವಿಜ್ಞಾನ ಸಂಕಿರಣದಲ್ಲಿ, ಶುಭ್ರತ, ಈಗಾಗಲೇ ತಾವು ಪಡೆದಿರುವ ಅಂತರ್ರಾಷ್ಟ್ರೀಯ ಫೆಲೋಶಿಪ್ ಗಳ ಕುರಿತು ವಿಚಾರ ಮಂಡಿಸಿದರು.
ಡಬ್ಲ್ಯೂಎಫ್’ಎಸ್’ಬಿಪಿ ಪ್ರಶಸ್ತಿ ಗೌರವ
ಮನೋವೈದ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮೂಲಕ ವಿಭಿನ್ನ ಛಾಪು ಮೂಡಿಸಿರುವ ಡಾ.ಶುಭ್ರತಾ ಅವರಿಗೆ ವರ್ಲ್ಡ್ ಫೆಡರೇಶನ್ ಆಫ್ ಸೊಸೈಟೀಸ್ ಆಫ್ ಬಯೊಲಾಜಿಕಲ್ ಸೈಕಿಯಾಟ್ರಿ(ಡಬ್ಲ್ಯೂಎಫ್’ಎಸ್’ಬಿಪಿ) ವತಿಯಿಂದ ವಿಶೇಷ ಗೌರವ ದೊರಕಿದೆ.
ಯುವ ಸಂಶೋಧನಾ ಪ್ರಶಸ್ತಿ(Young Investigator award)ಗೆ ಪಾತ್ರವಾಗಿರುವ ಶುಭ್ರತಾ ಅವರಿಗೆ ಕೆನಡಾದಲ್ಲಿ ನಡೆಯಲಿರುವ ವರ್ಲ್ಡ್ ಕಾಂಗ್ರೆಸ್ ಆಫ್ ಬಯೋಲಾಜಿಕಲ್ ಸೈಕಿಯಾಟ್ರರಿಯಲ್ಲಿ ಪ್ರದಾನ ಮಾಡಲಾಗುತ್ತದೆ. ಜೈವಿಕ ಮನೋವೈದ್ಯಕೀಯ ಶಾಸ್ತ್ರ(biological psychiatry)ವಿಚಾರದಲ್ಲಿ 40 ವರ್ಷದ ಒಳಗಿನ ವೈದ್ಯರಿಗೆ ಸಂಶೋಧನೆಯಲ್ಲಿ ಕೊಡ ಮಾಡುವ ಈ ಪ್ರಶಸ್ತಿಯನ್ನು ಈ ಬಾರಿ ಭಾರತದಿಂದ ಮೂವರು ಮಾತ್ರ ಪಡೆದುಕೊಂಡಿದ್ದು, ಇದರಲ್ಲಿ ಡಾ.ಶುಭ್ರತಾ ಸಹಒಬ್ಬರು ಎಂಬುದು ಹೆಮ್ಮೆಯ ಸಂಗತಿ.
ಈ ಪ್ರಶಸ್ತಿ ಅಂತಾರಾಷ್ಟ್ರೀಯ ಸಮಾವೇಶದ ಉಚಿತ ನೋಂದಣಿ, ಕೆನಡಾಗೆ ತೆರಳಲು 400 ಯುರೋ ಹಣವನ್ನು ಒಳಗೊಂಡಿದೆ.ಮಕ್ಕಳಲ್ಲಿ ಸ್ವಲೀನತೆ ಮತ್ತು ಅಪಸ್ಮಾರ ಬಗ್ಗೆ ಸಂಶೋಧನಾ ಗ್ರಂಥವನ್ನು ಇವರು ಮಂಡಿಸಲಿದ್ದಾರೆ.
Discussion about this post