ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎನ್.ಸಿ.ಸಿ. ಎಂದರೆ ಸೇವೆ, ಸೇವೆಗಿಂತ ಮಿಗಿಲಾದ ತೃಪ್ತಿ ಇನ್ನೊಂದಿಲ್ಲ. ಆದ್ದರಿಂದ ಪ್ರತಿಯೊಬ್ಬ ಕೆಡೆಟ್ ಕೂಡ ತನ್ನನ್ನು ತಾನು ಸೇವೆಗಾಗಿ ತೊಡಗಿಸಿಕೊಳ್ಳಬೇಕು ಎಂದು ಎನ್.ಸಿ.ಸಿ., 20 ಕರ್ನಾಟಕ ಬೆಟಲಿಯನ್ ಆಡಳಿತಾಧಿಕಾರಿ ಲೆ. ಕರ್ನಲ್ ಇಂದ್ರನೀಲ್ ಘೋಷ್ ಕರೆ ನೀಡಿದರು.
ಕಾಲೇಜಿನ ಎನ್.ಸಿ.ಸಿ. ವಿಭಾಗದ ವತಿಯಿಂದ ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮದಡಿಯಲ್ಲಿ ‘ದೇಶ ಕಟ್ಟುವಲ್ಲಿ ಎನ್.ಸಿ.ಸಿ. ಕೆಡೆಟ್‌ಗಳ ಪಾತ್ರ ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಸಿ.ಸಿ. ‘ಸಿ’ ಸರ್ಟಿಫಿಕೇಟ್‌ಗಳನ್ನು ‘ಎ’ ಗ್ರೇಡ್‌ನಲ್ಲಿ ಪಡೆದುಕೊಂಡರೆ ಅವಕಾಶದ ಬಾಗಿಲುಗಳು ತೆರೆದುಕೊಳ್ಳತ್ತದೆ, ಕೆಡೆಟ್‌ಗಳ ಜವಾಬ್ದಾರಿ ಹಾಗೂ ಭಾರತೀಯ ಸೇನೆಯಲ್ಲಿ ಭರ್ತಿ ಪಡೆಯಲು ಎನ್.ಸಿ.ಸಿ. ಸರ್ಟಿಫಿಕೇಟ್ ಹೇಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
Also read: ಶಾಸಕ ಬಂಡೆಪ್ಪ ಖಾಶೆಂಪುರ್ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
ಗೌಹಾಟಿ ಇಂಡಿಯನ್ ಆಟ್ಸ್ ಆಂಡ್ ಹಿಸ್ಟರಿ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪ್ರೊ. ಡಿ.ಎಸ್. ಸೋಮಶೇಖರ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನೆಪಿಸುತ್ತಾ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಹಾಗೂ ಕ್ರಾಂತಿಕಾರಿಗಳ ಪಾತ್ರವನ್ನು ವಿಶ್ಲೇಷಿಸಿದರು. ಎನ್.ಸಿ.ಸಿ. ಕೆಡೆಟ್‌ಗಳು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆಯುವುದರ ಜೊತೆಗೆ ಸಂವಿಧಾನದ ಬಗ್ಗೆ ತಿಳಿದಿರಬೇಕು. ಅದರಲ್ಲಿನ ಮೂಲಭೂತ ಕರ್ತವ್ಯಗಳನ್ನು ಶಿರಸಾವಹಿಸಿ ಪಾಲಿಸಬೇಕು ಎಂದು ಕೆಡೆಟ್‌ಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ.ಕೆ. ವೀಣಾ, ಕಾಲೇಜಿನ ಹಳೆ ಎನ್.ಸಿ.ಸಿ. ಕೆಡೆಟ್‌ಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಿದರು.
ಕಾರ್ಯಕ್ರಮದ ಆಯೋಜಕರಾದ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಯು. ಶಶಿರಾಜ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಶಿವಮೂರ್ತಿ ಎ. ಸುಬೇದಾರ್ ಮೇಜರ್ ರಫೀಕ್ ಇಕ್ಬಾಲ್ ಉಪಸ್ಥಿತರಿದ್ದರು.
ಕೆಡೆಟ್‌ಗಳಾದ ವೈಷ್ಣವಿ ಮತ್ತು ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕೆಡೆಟ್ ಶುಭಾ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post