ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ ನಿ.ದ ನೂತನ ಅಧ್ಯಕ್ಷರಾಗಿ ಸಂಘದ ನಿರ್ದೇಶಕರೂ ಆದ ಹೊಳಲೂರು ಮಾರುತಿ ಪ.ಪೂ.ಕಾಲೇಜಿನ (ಹೈಸ್ಕೂಲ್ ವಿಭಾಗ) ಮುಖ್ಯೋಪಾಧ್ಯಾಯರಾದ ಯೋಗೇಶ್ ಎಸ್. ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರದ ಕೆ-2 ಜಾರಿಯಿಂದಾಗಿ ಸಾಲ ಮರುಪಾವತಿಗೆ ಸಮಸ್ಯೆಯಾಗಿದೆ. ಆ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ತಾವು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಲು ಸಹಕರಿಸಿದ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರಿಗೆ ಅವರು ಇದೇ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದರು.

ಸಹಕಾರ ಸಂಘಗಳ ಇಲಾಖೆಯ ಜಲಜಾಕ್ಷಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.











Discussion about this post