ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಶಿವಮೊಗ್ಗ ತಾಲ್ಲೂಕು ಶಾಖೆಗೆ ನಡೆದ ಚುನಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಂಡಕ್ಕೆ ಭರ್ಜರಿ ಗೆಲುವು ಲಭಿಸಿದೆ.
ತಾಲ್ಲೂಕು ಸಂಘದ 20 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಿ.ಎಸ್.ಷಡಾಕ್ಷರಿ ಬೆಂಬಲಿತ ಧರ್ಮಪ್ಪ ನೇತೃತ್ವದ ತಂಡದ 18 ನಿರ್ದೇಶಕರು ಭಾರೀ ಮತದ ಅಂತರದಿಂದ ಜಯ ಶಾಲಿಯಾಗಿದ್ದಾರೆ.

ಪ್ರೌಢಶಾಲಾ ಸಹ ಶಿಕ್ಷಕರ ಬೇಡಿಕೆಗಳ ಮತ್ತು ಸಮಸ್ಯೆಗಳ ಕುರಿತು ಸರ್ಕಾರದೊಂದಿಗೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ಹಲವು ಸಮಸ್ಯೆಗಳನ್ನು ಬಗೆ ಹರಿಸಲಾಗಿದೆ. ಅದರ ಪರಿಣಾಮ ಚುನಾವಣೆಯಲ್ಲಿ ಶಿಕ್ಷಕರ ಸಮೂಹ ನಮ್ಮ ತಂಡಕ್ಕೆ ಭರ್ಜರಿ ಗೆಲುವನ್ನು ತಂದುಕೊಟ್ಟಿದೆ. ಇದಕ್ಕಾಗಿ ಶಿಕ್ಷಕ ಸಮೂಹಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ
ಸಿ.ಎಸ್. ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ
ಪ್ರೌಢಶಾಲಾ ಸಹ ಶಿಕ್ಷಕರು 18 ನಿರ್ದೇಶಕರನ್ನು ಗೆಲ್ಲಿಸುವ ಮೂಲಕ ಷಡಾಕ್ಷರಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅವರು ನಡೆಸುತ್ತಿರುವ ನಿರಂತರ ಪ್ರಯತ್ನಕ್ಕೆ ತಮ್ಮ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
Also read: ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ನೂತನ ಆರಂಭ: ಅಧ್ಯಕ್ಷರಾಗಿ ಮಂಜುಳಾ ಆಯ್ಕೆ
ಮೇರಿ ಇಮ್ಯಾಕ್ಯುಲೇಟ್ ಬಾಲಿಕಾ ಪ್ರೌಢಶಾಲೆಯ ಆಶಾ ಎ.ಎಸ್. 328 ಮತಗಳು, ಬಿ.ಹೆಚ್.ರಸ್ತೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎ.ಸಿ.ಆಶಾದೇವಿ 322, ಕಾಚಿನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಜಿ.ಅಶೋಕ್ ಕುಮಾರ್ 332, ಭುವನೇಶ್ವರಿ ಪ್ರೌಢಶಾಲೆಯ ಎ.ಹೆಚ್.ಬಸವರಾಜ್ 341, ಡಿವಿಎಸ್ ಪ್ರೌಢಶಾಲೆ ಯ ಹೆಚ್.ಎನ್.ಬಸವರಾಜ್ 337, ಜೆಪಿಎನ್ ಪ್ರೌಢಶಾಲೆಯ ಎಸ್. ಚಂದ್ರಕಲಾ 310, ಪಿಳ್ಳಂಗೆರೆ ಸರ್ಕಾರಿ ಪ್ರೌಢಶಾಲೆಯ ವೈ.ಎಂ. ಧರ್ಮಪ್ಪ 371, ಪುರದಾಳು ಸರ್ಕಾರಿ ಪ್ರೌಢ ಶಾಲೆಯ ಯು.ಎಸ್,ಹೇಮಂತ್ ಕುಮಾರ್ 328, ವಿನೋಬನಗರ ನೇತಾಜಿ ಪ್ರೌಢಶಾಲೆಯ ಟಿ. ಮಹಂತೇಶ್ 314, ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯ ಕೆ.ಮಹೇಶ್ವರಪ್ಪ 316, ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಎಸ್.ಸಿ.ನಿಂಗಪ್ಪ 337, ಶರಾವತಿ ರಾಷ್ಟ್ರೀಯ ಪ್ರೌಢಶಾಲೆಯ ಪ್ರಕಾಶ್ ಓಲೇಕರ್ 293, ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಬಿ.ಎಂ.ರಘು 321, ಹೊನ್ನವಿಲೇ ಸರ್ಕಾರಿ ಪ್ರೌಢಶಾಲೆ ಕೆ.ಎಲ್. ರಾಜು 317, ಹಾರ್ನಹಳ್ಳೀ ಉರ್ದು ಸರ್ಕಾರಿ ಪ್ರೌಢಶಾಲೆಯ ಡಿ.ರಾಮಚಂದ್ರ 303, ವಿನೋ ಬನಗರ ಸರ್ಕಾರಿ ಪ್ರೌಢಶಾಲೆಯ ಎಸ್.ಎನ್.ರಮೇಶ್ 317 ಹಾಡೋನಹಳ್ಳಿ ವೆಂಕಟೇಶ್ವರ ಪ್ರೌಢಶಾಲೆಯ ಶಿವ್ಯಾನಾಯ್ಕ್ 305, ಬಿ.ಹೆಚ್.ರಸ್ತೆ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಎಲ್.ಹೆಚ್. ಸುಜಾತ 293 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















