ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ತಾಲೂಕಿನ ಆನಂದಪುರಂ ಸಮೀಪ ರೈಲ್ವೆ ಹಳಿಯ ಮೇಲೆ ವಿದ್ಯುತ್ ತಂತಿಯೊಂದು ತುಂಡಾಗಿದ್ದ ಬಿದ್ದದ್ದ ಕಾರಣ ಬೆಂಗಳೂರಿನ ಇಂಟರ್ ಸಿಟಿ ರೈಲು Inter City ಸಂಚಾರ ಸುಮಾರು 2 ಗಂಟೆಗಳ ಕಾಲ ವಿಳಂಬವಾಗಿವೆ.
ಆನಂದಪುರಂ ಸಮೀಪದಲ್ಲಿ ವಿದ್ಯುತ್ ತಂತಿಯೊAದು ತುಂಡಾಗಿ ಹಳಿಯ ಮೇಲೆ ಬಿದ್ದಿತ್ತು. ಇನ್ನು, ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಬೆಂಗಳೂರು ಇಂಟರ್ ಸಿಟಿ ರೈಲು 6.05ರ ವೇಳೆಗೆ ಈ ಸ್ಥಳದಲ್ಲಿದ್ದ ತಂತಿಯ ಮೇಲೆ ಚಲಿಸಿ ನಿಂತಿದೆ.

Also read: ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್: ಬಾಲಕಿ ದುರ್ಮರಣ
ಈ ಮಾರ್ಗದಲ್ಲಿ ವಿದ್ಯುತ್ತೀಕರಣ ಕಾಮಗಾರಿ ನಡೆಯುತ್ತಿದೆ. ಇದರ ತಂತಿ ತುಂಡಾಗಿ ಹಳಿ ಮೇಲೆ ಬಿದ್ದಿದ್ದು, ಇದು ಸಂಚಾರಕ್ಕೆ ಅಡ್ಡಿಯಾಗಿತ್ತು. ಕಾಮಗಾರಿ ನಡೆಸಿ ತಂತಿ ತೆರವುಗೊಳಿಸಿದ ಬಳಿಕ ಇಂಟರ್ ಸಿಟಿ ರೈಲು ಸಂಚಾರ ಮುಂದುವರೆಯಿತು.
ಈ ಘಟನೆಯಿಂದಾಗಿ ಇಂಟರ್ ಸಿಟಿ ರೈಲು 2 ಗಂಟೆ ತಡವಾಗಿ ಚಲಿಸಿದೆ.











Discussion about this post