ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉದ್ಯೋಗಿಗಳು ಯಾವುದೇ ಸಂಸ್ಥೆಯ ಜೀವಾಳವಾಗಿದ್ದು, ಅವರ ಕಾರ್ಪೋರೇಟ್ ಸಂಸ್ಕೃತಿ ಮತ್ತು ಕೆಲಸದ ಸ್ಥಳದಲ್ಲಿ ತೊಡಗಿಸಿಕೊಳ್ಳುವಿಕೆಯು ಸಂಸ್ಥೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಏಷ್ಯಾ ಪೆಸಿಫಿಕ್ ಎಸ್‌ಸಿ ಜಾನ್ಸನ್ ಹಿರಿಯ ನಿರ್ದೇಶಕ, ಮಾನವ ಸಂಪನ್ಮೂಲ ಮುಖ್ಯಸ್ಥ ವಿನೋದ್ ರೈ ತಿಳಿಸಿದರು.
ಪೆಸಿಟ್ #PESITM ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ಇಂಟರಾಕ್ಷನ್ ಸೆಲ್‌ನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ದಿ ರಿಯಲ್ ವರ್ಡ್ ಇಂಪಾರ್ಟೆನ್ಸ್ ಆಫ್ ಕಾರ್ಪೋರೇಟ್ ಕಲ್ಚರ್ ಎಂಬ ವಿಷಯ ಕುರಿತಾದ ತಾಂತ್ರಿಕ ಚರ್ಚಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

Also read: ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಗಳ ಅಧ್ಯಯನ ಅಗತ್ಯ: ಸಿಎಂ ಸಿದ್ದರಾಮಯ್ಯ
ಕಾಲೇಜಿನ ಪ್ರಾಂಶುಪಾಲ ಬಿ.ಎನ್. ಯುವರಾಜ್ ಮಾತನಾಡಿ, ವಿಮರ್ಶಾತ್ಮಕ ಚಿಂತನೆ, ವಾಕ್ ಸಾಮರ್ಥ್ಯ ಹಾಗೂ ಸಮಸ್ಯೆ ಬಗೆಹರಿಸುವ ಕೌಶಲ್ಯದ ಜೊತೆಗೆ ಕಾರ್ಪೋರೇಟ್ ಕಲ್ಚರ್ ಬಗೆಗಿನ ಅರಿವು ಅತ್ಯಂತ ಅವಶ್ಯ ಎಂದು ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post