ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡಗದ್ದೆ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಮತ್ತು ಮಲೆನಾಡು ರೋಟರಿ ಕ್ಲಬ್ ಶಿವಮೊಗ್ಗ ಇವರ ವತಿಯಿಂದ ಶಾಲೆಗೆ ವಿಜ್ಞಾನ ಪ್ರಯೋಗಾಲಯದ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ರೊ ಡಾ. ಸಿದ್ಧಲಿಂಗಮೂರ್ತಿ ಮಾತನಾಡಿ, ಪರಿಸರದ ಮಹತ್ವ ಹಾಗೂ ವಿಜ್ಞಾನ ಹೇಗೆ ಮಕ್ಕಳ ಬೌದ್ಧಿಕ ಮಟ್ಟವನ್ನು ಸುಧಾರಿಸುತ್ತದೆ ಎಂದು ಹಾಗೂ ರೋಟರಿ ಅಂಗ ಸಂಸ್ಥೆಯಾದ ಇಂಟರಾಕ್ಟ್ ಕ್ಲಬ್ ನ ಮಹತ್ವ ತಿಳಿಸಿದರು.
ಉದ್ಘಾಟನೆ ಮಾಡಿದ ರೊ ಪಿಡಿಜಿ ರವಿಯವರು, ಮಕ್ಕಳಿಗೆ ವಿಜ್ಞಾನದ ಬಗ್ಗೆ ತಿಳಿಸಿ, ಮಕ್ಕಳಿಗೆ ಹಲವು ಪ್ರಶ್ನೆಗಳನ್ನು ಕೇಳಿ ಮಕ್ಕಳ ಬೌದ್ಧಿಕ ಮಟ್ಟದ ಬಗ್ಗೆ ಪ್ರಶಂಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಲೆನಾಡುಗೆ ಶಾಲೆಯಿಂದ ಅಭಿನಂದನಾ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರುಗಳು ಹಾಗೂ ಪೋಷಕ ವೃಂದ ಮತ್ತು ಮಕ್ಕಳು ಭಾಗವಹಿಸಿದ್ದರು.
ಮಲೆನಾಡು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ರೊ. ಮುಸ್ತಾಕ್ ಅಲಿಷಾ, ರೊ. ಪಿಡಿಜಿ ಹೆಚ್.ಎಲ್.ರವಿ, ರೊ. ಡಾ. ಸಿದ್ಧಲಿಂಗಮೂರ್ತಿ, ರೊ. ರಶ್ಮಿ, ರೊ. ಅನು, ರೊ. ರೂಪ ಹಾಗೂ ರೊ. ಬಸವರಾಜ್ ಅಣಜಿ ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಅಂತೋಣಿ ಮೇರಿ ಅನಿತಾ ಉಪಸ್ಥಿತರಿದ್ದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ವಹಿಸಿದ್ದರು. ಪ್ರಾರ್ಥನೆಯನ್ನು ವಿದ್ಯಾರ್ಥಿನಿ ಮಾನ್ವಿ,
ನಿರೂಪಣೆಯನ್ನು ಶಿಕ್ಷಕರಾದ ಸುಬ್ರಮಣ್ಯ, ವಂದನಾರ್ಪಣೆಯನ್ನು ಶಿಕ್ಷಕರಾದ ಪ್ರಕಾಶ ಆರ್ ರವರು ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post