ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ #K S Eshwarappa ಶುಕ್ರವಾರ ಬೆಳಗ್ಗೆ ಅಂಭುತೀರ್ಥದಲ್ಲಿ ಶ್ರೀರಾಮೇಶ್ವರ ಸ್ವಾಮಿಯ ದರ್ಶನ ಪಡೆದು, ಕಾರ್ಯಕರ್ತರ ಸಭೆ ನಡೆಸುವ ಮೂಲಕ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದರು.
ಈ ವೇಳೆ ಸಭೆಯಲ್ಲಿ ಈಶ್ವರಪ್ಪ ಬ್ರಿಗೇಡ್ ಅಧ್ಯಕ್ಷ ವಾಟಗೋಲು ಸುರೇಶ್ ಮಾತನಾಡಿ, ಕರ್ನಾಟಕ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಅಸ್ಥಿತ್ವಕ್ಕೆ ಬಂದಿದೆ. ಕಾರ್ಯಕರ್ತರು ಈ ವ್ಯವಸ್ಥೆಯಿಂದ ನೊಂದಿದ್ದಾರೆ. ಹೀಗಾಗಿ ರಾಜ್ಯದ ಜನ ಹಾಗೂ ಕಾರ್ಯಕರ್ತರು ಬದಲಾವಣೆ ಬಯಸಿದ್ದಾರೆ. ಕುಟುಂಬ ರಾಜಕಾರಣ ಕಿತ್ತು ಹಾಕಲು ಈಶ್ವರಪ್ಪರವರಿಂದ ಮಾತ್ರ ಸಾಧ್ಯ ಎಂದರು.
ಜನ ಬಯಸುವ ಬದಲಾವಣೆ ತರಲು ಹಾಗೂ ಕಾರ್ಯಕರ್ತರ ಧ್ವನಿಯಾಗಲು ಈಶ್ವರಪ್ಪಗೆ ಹೆಚ್ಚಿನ ಬೆಂಬಲ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ತಕ್ಕ ಉತ್ತರ ನೀಡಬೇಕಿದೆ. ಹೀಗಾಗಿ ನಾವೆಲ್ಲಾ ಈಶ್ವರಪ್ಪರನ್ನು ಬೆಂಬಲಿಸಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ, ಪ್ರಧಾನಿ ನರೇಂದ್ರ ಮೋದಿಯವರ #PM Narendra Modi ಬಳಿ ಕಳಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
Also read: ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ: ಕುಮಾರ್ ಬಂಗಾರಪ್ಪ ಟಾಂಗ್ ನೀಡಿದ್ದು ಯಾರಿಗೆ
ಚುನಾವಣೆ ಪ್ರಚಾರದ ವೇಳೆ ರಿಪ್ಪನ್ ಪೇಟೆಯ ಶ್ರೀ ಸಿದ್ಧಿ ವಿನಾಯಕ ಸ್ವಾಮಿಯ ದರ್ಶನ ಪಡೆದರು. ಪ್ರಚಾರದ ವೇಳೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಈಶ್ವರಪ್ಪರನ್ನು ಬೆಂಬಲಿಸುವುದಾಗಿ ವಿಶ್ವಾಸ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಈಶ್ವರ ಶೆಟ್ಟಿ, ಸಮಿತಿ ಸದಸ್ಯರಾದ ಆಶಾ ನರಸಿಂಹ, ಇಂದ್ರಮ್ಮ, ಗಣೇಶ್ ಕಾಮತ್ , ಲೀಲಾವತಿ, ಮಮತ ಗರ್ತಿಕೆರೆ, ಅಭಿ ಶೆಟ್ಟಿ, ರಾಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















