ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ, #Azeem Prem Ji University ಬೆಂಗಳೂರು ಮತ್ತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳ #Sahyadri College ವತಿಯಿಂದ ಆಗಷ್ಟ್ 2, 2024 ರಂದು ‘ಸಾಹಿತ್ಯ ಸಹವಾಸ’ ಎಂಬ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕುವೆಂಪು ವಿವಿ #Kuvempu University ವ್ಯಾಪ್ತಿಯ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರ ಕಥೆಗಳು ಪುಸ್ತಕ ಕುರಿತು ವಿಮರ್ಶ ಬರಹ ಲೇಖನ ಸ್ಪರ್ಧೆ, ಹಾಗೂ ಪಿ.ಲಂಕೇಶ್‍ರವರ ಗುಣಮುಖ ಅಥವಾ ಸಂಕ್ರಾಂತಿ ನಾಟಕ ಕುರಿತು ವಿಮರ್ಶ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ.
Also read: ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ದೇಶದ ಯುವಜನತೆಯ ಕ್ಷಮೆ ಕೇಳಬೇಕು
ಪ್ರತಿ ಕಾಲೇಜಿನಿಂದ 2 ವಿದ್ಯಾರ್ಥಿಗಳು ಭಾಗವಹಿಸಬಹುದು. ಇದಕ್ಕಾಗಿ ಜು.27ರವರೆಗೆ ಲೇಖನಗಳನ್ನು ತಲುಪಿಸಬೇಕು. ಲೇಖನಗಳು 6ರಿಂದ8 ಪುಟ ಅಥವಾ 2000 ಪದಗಳನ್ನು ಮೀರಬಾರದು. ಕ್ರಮವಾಗಿ 1500 ರೂ., 1250ರೂ. ,1000 ರೂ., ಮೂರು ಬಹುಮಾನಗಳು ಇರುತ್ತವೆ. ಲೇಖನಗಳನ್ನು ಡಾ. ಪ್ರಕಾಶ್ ಮರ್ಗನಳ್ಳಿ ಕನ್ನಡ ವಿಭಾಗ, ಸಹ್ಯಾದ್ರಿ ವಾಣಿಜ್ಯ ಕಾಲೇಜು ಇಲ್ಲಿಗೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗೆ 9480046032ವನ್ನು ಸಂಪ್ರಿಸಬಹುದಾಗಿದೆ.
ಅ.2ರಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಬಹುಮಾನ ವಿತರಿಸಲಾಗುವುದು. ಮತ್ತು ಅಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರು ಲಂಕೇಶ್, ತೇಜಸ್ವಿ, ಕುವೆಂಪು ಮತ್ತು ದಲಿತ ಸಾಹಿತ್ಯ ಕುರಿತು ಮಾತನಾಡಿರುವ ವೀಡಿಯೋ ಸರಣಿ ಬಿಡುಗಡೆ ಮಾಡಲಾಗುವುದು. ಇದೇ ಸಾಹಿತಿಗಳ ಮೇಲೆ ವಿಚಾರ ಗೋಷ್ಠಿಗಳು ನಡೆಯಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post