ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಇ.ವಿ. (ವಿದ್ಯುತ್ ಚಾಲಿತ) ವಾಹನಗಳು #EV Vehicles ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಂಸದ ಬಿ.ವೈ.ರಾಘವೇಂದ್ರ #MP B Y Raghavendra ಹೇಳಿದರು.
ಅವರುಶಿವಮೊಗ್ಗ-ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಈಗಲ್ ಇ.ವಿ. ಮೋಟಾರ್ಸ್ ಶೋ ರೂಂ ಉದ್ಘಾಟಿಸಿ ಮಾತಾನಾಡಿದರು.
ಇಂದು ಜಗತ್ತು ಪರಿಸರ ಮಾಲಿನ ಸಮಸ್ಯೆಯನ್ನ ಎದುರಿಸುತ್ತಿದೆ ಎಲ್ಲ ದೇಶಗಳು ಮಾಲಿನ್ಯ ದ ಬಗ್ಗೆ ಇಂಧನದ ಬದಲು ಪರ್ಯಾಯ ವ್ಯವಸ್ಥೆ ಮಾಡಿ ಕೊಳ್ಳುತ್ತಿವೆ, ಈ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ರಸ್ತೆಗೆ ಇಳಿಯುವುದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದರು.
ಕೇಂದ್ರ ಸರ್ಕಾರ ಈಗಾಗಲೇ ವಿದ್ಯುತ್ ಚಾಲಿತ ವಾಹನಗಳ ಹೆಚ್ಚಳಕ್ಕೆ ಉತ್ತೇಜನ ನೀಡುತ್ತಿದೆ ಅಲ್ಲದೆ ಪ್ರಧಾನಿ ಮೋದಿಜೀ ಯವರು ಜಿಎಸ್‍ಟಿಯನ್ನು ಇಳಿಸಿದ್ದರಿಂದ ವಾಹನಗಳ ಮೇಲಿನ ತೆರಿಗೆ ಅತ್ಯಂತ ಕಡಿಮೆಯಾಗಿದ್ದು, ಇವಿ ವಾಹನಗಳು ಇಂದು ಇಂದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿವೆ, 70,000ಕ್ಕೆ ಸಿಗುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‍ಗಳು ಈಗ 45 ಸಾವಿರಕ್ಕೂ ದೊರೆಯುತ್ತದೆ ಇದರ ಪ್ರಯೋಜನವನ್ನು ನಮ್ಮ ಯುವ ಜನತೆ ಪಡೆಯಬೇಕು ಎಂದರು.
ಈಗಲ್ ಶೋ ರೂಂ ಮಾಲೀಕ ಹಾಗು ಇ.ವಿ. ಮೋಟಾರ್ಸ್ ರಾಜ್ಯ ವಿತರಕ ಇರ್ಫಾನ್ ಮಾತಾನಾಡಿ ನಮ್ಮ ಶೋ ರೂಂ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇ.ವಿ. ವಾಹನಗಳ ಮೇಲೆ ವಿಶೇಷ ರಿಯಾಯಿತಿ ಇದೆ ಎಂದರು. ಇದಕ್ಕೂ ಮೊದಲು ಜಂಗಮ ಮಹಿಳಾ ಡೊಳ್ಳು ತಂಡದವರು ಸಂಸದರಿಗೆ ಭವ್ಯ ಸ್ವಾಗತ ನೀಡಿದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಚೈತ್ರ ನಿರಂತರ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post