ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತಮ ಆರೋಗ್ಯ ಮತ್ತು ನೆಮ್ಮದಿ ಸಿಗಬೇಕಾದರೆ ಎಲ್ಲರೂ ಕ್ರೀಡಾಪಟುಗಳು ಆಗಲೇಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಅವರು ಇಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಕರ್ನಾಟಕ ಮಾಸ್ಟರ್‍ಸ್ ಗೇಮ್ಸ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ 4ನೇ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಮತ್ತು ಗೇಮ್ಸ್‌ಅನ್ನು ಉದ್ಘಾಟಿಸಿ ಮಾತನಾಡಿದರು.

Also read: ಜಿಲ್ಲೆಯ ಎಲ್ಲ ಪ್ರಮುಖ ಮಠಾಧೀಶರೊಂದಿಗೆ ಸಂಸದ ರಾಘವೇಂದ್ರ ವಿಮಾನ ನಿಲ್ದಾಣ ವೀಕ್ಷಣೆ
ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದುಶ್ಚಟಗಳು ದೂರವಾಗುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಬಿಪಿ, ಶುಗರ್ ದೂರವಾಗುತ್ತದೆ. ಅನಾರೋಗ್ಯ ಕಾಡುವುದಿಲ್ಲ. ಆದರೆ ನಿರಂತರವಾಗಿ ಭಾಗವಹಿಸುವುದು ಮುಖ್ಯ. ದೇಹಕ್ಕೆ ವ್ಯಾಯಾಮ ಅತಿ ಅಗತ್ಯ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾ ಬಂದಿದೆ. ನಮ್ಮ ದೇಶದ ಕ್ರೀಡಾಪಟುಗಳು ಕೂಡ ಹೆಚ್ಚಿನ ಪದಕಗಳನ್ನು ತರುತ್ತಿದ್ದಾರೆ. ಮಾಸ್ಟರ್‍ಸ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕೂಡ ಅನುದಾನದ ಬೇಡಿಕೆ ಇಟ್ಟಿದ್ದಾರೆ. ಕಂಡಿತ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತದೆ. ನಿಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಈ.ಕಾಂತೇಶ್, ಸುರೇಖಾ ಮುರುಳೀಧರ್, ಸತೀಶ್‌ಕುಮಾರ್ ಶೆಟ್ಟಿ, ಎಸ್.ಪಿ.ದಿನೇಶ್, ಮಂಜುನಾಥ್‌ಸ್ವಾಮಿ, ಪುಷ್ಪ ಎಸ್.ಶೆಟ್ಟಿ, ಸದಾನಂದ ಆಳ್ವ, ಕುದ್‌ಸಿಯಾ ನಜೀರ್, ಶಾಲಿನಿಶೆಟ್ಟಿ, ಸುಗುಣಶೆಟ್ಟಿ ಮೊದಲಾದವರಿದ್ದರು.











Discussion about this post