ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪತ್ರಿಕಾ ಸಂಪಾದಕರ ಸಂಘ, ಮಹಾನಗರ ಪಾಲಿಕೆ, ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆವರಣದಿಂದ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಲೋಖಂಡೆ ಸ್ನೇಹಲ್ ಸುಧಾಕರ್, ಮತದಾನ ಜಾಗೃತಿ ಇಂದು ಬಹುಮುಖ್ಯವಾಗಿದೆ. ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ಸದೃಢ ರಾಜ್ಯ ಕಟ್ಟಲು ಮತದಾನದ ಅವಶ್ಯಕತೆ ಇದೆ. ಮೇ 10ರಂದು ಚುನಾವಣೆ ನಡೆಯಲಿದೆ. ಆ ದಿನ ಯಾವುದೇ ಕಾರಣ ಹೇಳದೆ ಮತಗಟ್ಟೆಗೆ ಬಂದು ಪ್ರತಿಯೊಬ್ಬ ಮತದಾರನೂ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.
ಮತದಾನ ಪ್ರಜಾಪ್ರಭುತ್ವದ ಹಬ್ಬ
ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಈಗಾಗಲೇ ಸುಮಾರು 64 ಸಾವಿರ ಹೊಸ ಮತದಾರರ ಚೀಟಿಗಳು ಬಂದಿವೆ. 50 ಸಾವಿರ ಮತಚೀಟಿಗಳನ್ನು ಅಂಚೆ ಮೂಲಕ ಕಳಿಸಲಾಗಿದೆ. ಉಳಿದವನ್ನು ಇಂದು ಮತ್ತು ನಾಳೆ ಕಳಿಸಲಾಗುವುದು. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರುವವರು ಇಂದು ಮತ್ತು ನಾಳೆ ಅವಕಾಶವಿದ್ದು, ಅದನ್ನು ಉಪಯೋಗಿಸಿಕೊಳ್ಳಿ.ಜಿಲ್ಲಾಧಿಕಾರಿ ಆರ್. ಸೆಲ್ವಮಣಿ
ಸ್ವೀಪ್ ಸಮಿತಿಯ ಟಿ.ಆರ್. ಅನುಪಮಾ ಮಾತನಾಡಿ, ಮತದಾನ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ವಿಕಲಚೇತನರಿಂದ ಕ್ಯಾಂಡಲ್ ಅಭಿಯಾನದ ಮೂಲಕ ಹಾಗೂ ಬೈಕ್ ಮತ್ತು ಸೈಕಲ್ ಜಾಥಾದ ಮೂಲಕವೂ ಜಾಗೃತಿ ಹಮ್ಮಿಕೊಳ್ಳಲಾಗುವುದು ಎಂದರು.
Also read: ಗ್ರಾಮೀಣ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಗೆಲುವು: ಶಾಸಕ ಅಶೋಕ್ ನಾಯ್ಕ ವಿಶ್ವಾಸ
ಶ್ರೀನಿಧಿ ಸಂಸ್ಥೆಯ ಟಿ. ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್ ಗೋಪಿನಾಥ್, ಉದ್ಯಮಿ ಎಲ್. ಸತ್ಯನಾರಾಯಣ್, ಜಿ. ವಿಜಯಕುಮಾರ್ ಸೇರಿದಂತೆ ಹಲವರು ಮತದಾನದ ಜಾಗೃತಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷ ಶಿ.ಜು. ಪಾಷಾ, ಕಾರ್ಯದರ್ಶಿ ಎಂ. ರವಿ, ಸಂಪಾದಕರ ಸಂಘದ ಅಧ್ಯಕ್ಷ ಜಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸ್ವಾಮಿ, ಖಜಾಂಚಿ ರಘುರಾಜ್, ಪದಾಧಿಕಾರಿಗಳಾದ ಜಿ.ಪದ್ಮನಾಭ್, ಹಾಲೇಶ್, ಕೃಷ್ಣಬನಾರಿ, ಸಹ್ಯಾದ್ರಿ ಮಂಜುನಾಥ್, ಕಣ್ಣಪ್ಪ, ನಾಗೇಶ್ ನಾಯ್ಕ, ಆನಂದ್, ಪಿ. ಆಕಾಶ್, ಭರತೇಶ್, ನಾಗರಾಜ ಕಲ್ಲುಕೊಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಗೋಪಾಲ ಯಡಗೆರೆ, ಸ್ಕೇಟಿಂಗ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಭಾರತೀಯ ಮಾನವ ಹಕ್ಕುಗಳ ಕಮಿಟಿಯ ಕೆ.ನಾಗರಾಜ್, ಎಸ್.ರಮೇಶ್,ಗೆಳೆಯರ ಬಳಗದ ಅನಿಲ್ ಕುಂಚಿ, ಹಾಡೋನಹಳ್ಳಿ ಜಗದೀಶ್, ಸ್ವೀಪ್ ಸಮಿತಿಯ ನವೀದ್ ಅಹಮದ್ ಪರ್ವೀಜ್, ಪ್ರಮುಖರಾದ ಲೋಕೇಶ್, ರತ್ನಾಕರ್, ಎಂ ರವಿ, ಪ್ರವೀಣ್, ಉಮಾ ಟಿ. ಸೇರಿದಂತೆ ಹಲವರು ಇದ್ದರು.
ಸ್ಕೇಟಿಂಗ್ ಜಾಥಾ ಮಹಾನಗರ ಪಾಲಿಕೆ ಆವರಣದಿಂದ ಆರಂಭವಾಗಿ, ವೀರಭದ್ರೇಶ್ವರ ಟಾಕೀಸ್ ರಸ್ತೆ, ಎಎ ಸರ್ಕಲ್, ಬಸ್‌ಸ್ಟ್ಯಾಂಡ್, ಕುವೆಂಪು ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ಮಹಾವೀರ ವೃತ್ತ, ಗೋಪಿ ವೃತ್ತದ ಮೂಲಕ ಮಹಾನಗರ ಪಾಲಿಕೆ ತಲುಪಿತು.
ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಹಾಗೂ ಪ್ರೊಬೆಷನರಿ ಐಎಎಸ್ ಅಧಿಕಾರಿ ದಲ್ಜಿತ್ ಸಿಂಗ್ ಅವರು ಮತದಾನದ ಜಾಗೃತಿ ಮೂಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















