ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಪ್ರಸಿದ್ದ ನಾಟಿ ವೈದ್ಯ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನ ಸಮೀಪದ ರಾಮನಸರ ಮಂಗಳದ ಶಿವಣ್ಣಗೌಡ (86) #Mangala Shivannagowda ಇಂದು ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ತಮ್ಮ ಎಂಟನೇ ವಯಸ್ಸಿಗೆ ತಂದೆ ಜೊತೆಗೆ ನಾಟಿ ವೈದ್ಯ ಪದ್ದತಿಯನ್ನು ಕಲಿತ ಶಿವಣ್ಣಗೌಡರು ಕಾಲು ನೋವು, ಮಂಡಿ ನೋವು, ಮೂಳೆ ಮುರಿತ, ವಾತಕಸ, ನಿಶ್ಯಕ್ತಿ, ಬೆನ್ನುನೋವು ಸೇರಿದಂತೆ ವಿವಿಧ ನೋವುಗಳಿಗೆ ಔಷಧಿಗಳನ್ನ ನೀಡುತ್ತಾ ಬಂದವರು ಇವರ ಬಳಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, #H D Devegowda ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, #K S Eshwarappa ಮಾಜಿ ಸಚಿವೆ ಮನೋರಮಾ ಮಧ್ವರಾಜ್, #Manorama Madhwaraj ಗೌರಿಲಂಕೇಶ್, #Gowri Lankesh ಚಂದ್ರಶೇಖರ್ ಕಂಬಾರರವರು #Chandrshekar Kambar ಒಳಗೊಂಡಂತೆ ವಿದೇಶಿಯರು ಸಹ ಚಿಕಿತ್ಸೆ ಪಡೆದಿದ್ದಾರೆ.
Also read: ಶಿವಮೊಗ್ಗ ಕಂಬಳ | ಟ್ರ್ಯಾಕ್ ನಿರ್ಮಾಣ ಭೂಮಿಪೂಜೆ, ಲೋಗೋ, ವೆಬ್ ಸೈಟ್ ಆರಂಭಕ್ಕೆ ಡೇಟ್ ಫಿಕ್ಸ್
ಮಂಗಳದಲ್ಲಿರುವ ಇವರ ಮನೆಯಲ್ಲಿ ನೀಡುವ ನೋವು ನಿವಾರಕ ಎಣ್ಣೆಗಾಗಿ ಜನರು ಇಲ್ಲಿ ಸರತಿ ಸಾಲಿನಲ್ಲಿ ಇವತ್ತಿಗೂ ಕಾದು ನಿಲ್ಲುತ್ತಾರೆ. ಪುತ್ರ ಶ್ರೀಕಾಂತ್‌ರವರ ಜೊತೆಗೂಡಿ ಪಾರಂಪರಿಕವಾಗಿ ಕಲಿತ ನಾಟಿ ವೈದ್ಯ ಪದ್ದತಿಯಲ್ಲಿ ತೀರ್ಥಹಳ್ಳಿ, ಮಂಡಗದ್ದೆ, ಹೆದ್ದಾರಿಪುರ ಸುತ್ತಮುತ್ತಲಿಂದ ಗಿಡಮೂಲಿಕೆಗಳನ್ನು ತಂದು ಔಷಧಿ ಮಾಡಿ ಅದನ್ನು ಜನರಿಗೆ ನೀಡುತ್ತಿದ್ದ ಇವರು ನೋವು ನಿವಾರಣೆಯಲ್ಲಿ ಎತ್ತಿದ್ದ ಕೈ ಆಗಿದ್ದರು. ಇವರ ಹೆಸರು ದೂರದ ಅಮೆರಿಕಾದವರೆಗೂ ವ್ಯಾಪಿಸಿತ್ತು.
ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಶಿವಣ್ಣ ಗೌಡ್ರು ತಮ್ಮನ್ನೇ ನಿರೀಕ್ಷಿಸಿ ಬರುವ ಜನರಿಗೆ ಅವರ ನೋವನ್ನ ಅರಿತು ಮದ್ದು ನೀಡುತ್ತಿದ್ದರು. ಶುದ್ಧ ಹಸುವಿನ ಸಪ್ಪೆ ತುಪ್ಪದ ಜೊತೆಗೆ ಒಂದಷ್ಟು ಮೂಲಿಕೆಗಳನ್ನ ನೀಡುತ್ತಿದ್ದ ಇವರು ದೇಹವನ್ನು ಪರೀಕ್ಷಿಸುವ ರೀತಿಯೇ ವಿಶಿಷ್ಟವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post