ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರ ನಾಡಹಬ್ಬ ಸಂಕ್ರಾಂತಿ #Sankranthi ಸಂಸ್ಕೃತಿಯ ಸಡಗರ, ನಾಡಿನ ರೈತರ ಸಂಭ್ರಮ ಮುಂದಿನ ಪೀಳಿಗೆಗೆ ವರವಾಗಿದ್ದು, ರೈತರ ಸಂಭ್ರಮ ಮುಗ್ದ ಮಕ್ಕಳ ನಗುವಿನಲ್ಲಿ ಕಾಣುತ್ತಿದೆ ಎಂದು ಕಿಯಾ ಶೋರೂಂನ ನಿರ್ದೇಶಕರು, ಪಿ ಇ ಎಸ್ ಟ್ರಸ್ಟ್‌ನ ಸಿಒಒ ಸುಭಾಷ್ ಹರ್ಷ ವ್ಯಕ್ತಪಡಿಸಿದರು
ನಗರದ ಪಿ ಇ ಎಸ್ ಪಬ್ಲಿಕ್ ಶಾಲೆಯಲ್ಲಿ #PES Public School ರೈತರ ನಾಡಹಬ್ಬ ಸಂಕ್ರಾಂತಿ ಅತ್ಯಂತ ಸಂಭ್ರಮಾಚರಣೆ ಮತ್ತು ಅರ್ಥಪೂರ್ಣವಾಗಿ ಮಕ್ಕಳಿಂದ ಆಚರಿಸಲ್ಪಟ್ಟಿತು. ನಾಡಿನ ಸಮೃದ್ಧಿಯ ಸಂಕೇತ, ಸಂಕ್ರಾಂತಿಯ ವಿಶೇಷತೆಯನ್ನ ಅರ್ಥಪೂರ್ಣವಾಗಿ ಎಂಟನೇ ತರಗತಿ ತನ್ಮಯಿ ಹಾಗೂ ದಕ್ಷ ತಿಳಿಸಿದರು.
ಮಕ್ಕಳಿಂದ ಸುಗ್ಗಿ ಹಾಡು, ಸುಗ್ಗಿ ನೃತ್ಯ ಮತ್ತು ರೈತರ ಬದುಕು ಬವಣೆಯ ಕಿರು ಪ್ರಹಸನವನ್ನು ಎಂಟನೇ ತರಗತಿ ವಿದ್ಯಾರ್ಥಿಗಳು ಮನಮೋಹಕಗೊಳ್ಳುವಂತೆ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಡಾ. ನಾಗರಾಜ, ಶ್ರವಣ ಹಾಗೂ ಅನ್ವೇಷಣಾ ಡೈರೆಕ್ಟರ್ ದಿಶಾ, ಸಂಗೀತ ಕ್ಷೇತ್ರದಲ್ಲಿ ಹಾಗೂ ಟೆನಿಸ್ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಸೆಮಿಫೈನಲ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು, ಸಂಯೋಜಕರು ಹಾಗೂ ಶಾಲೆಯ ಶಿಕ್ಷಕರು ,ಮಕ್ಕಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಪೂರ್ಣವಾಗಿ ನಡೆಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಚಿನ್ಮಯಿ ಹಾಗೂ ವೈಷ್ಣವಿಯವರು ನೆರವೇರಿಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















