ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಬಿಡುವಿಲ್ಲದ ಸಮಯದಲ್ಲಿಯೂ ಸಹ ಇಷ್ಟೊಂದು ಮಂದಿ, ತಮ್ಮ ತಮ್ಮ ಮಕ್ಕಳೊಂದಿಗೆ ಭಾಗವಹಿಸಿರುವುದು ನಿಜಕ್ಕೂ ಗಮನಾರ್ಹ ಸಂಗತಿ. ಮಕ್ಕಳೊಂದಿಗೆ ಅವರವರ ತಂದೆಯರು ಸಹ ಸಂಭ್ರಮ ಪಡುತ್ತಿರುವುದು ಉತ್ಸಾಹವನ್ನು ಹೆಚ್ಚಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್ ಅಭಿಪ್ರಾಯಪಟ್ಟರು.
ವಿಶ್ವ ಅಪ್ಪಂದಿರ ದಿನಾಚರಣೆ ಅಂಗವಾಗಿ, ನಗರದ ನೆಹರು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಕಾರದಲ್ಲಿ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತರ ಸಂಘ ‘ಆವೋಪ’, ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವಜನ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಪ್ಪ ಮತ್ತು ಮಕ್ಕಳಿಂದ ಗಾಳಿಪಟ ಸ್ಪರ್ಧೆಯನ್ನು ತಮ್ಮ ಪುತ್ರಿ ಸುಪ್ರಿತರೊಂದಿಗೆ ಪಾಲ್ಗೊಂಡು ಗಾಳಿಪಟ ಹಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕವಾಗಿ ಏರ್ಪಡಿಸಲಾಗಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಅಪ್ಪ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷರು ರೋಟರಿ ಮಾಜಿ ಅಧ್ಯಕ್ಷರು ಆದ ಜಿ. ವಿಜಯಕುಮಾರ್ ಅವರು ವಿಶೇಷ ಅತಿಥಿಗಾಗಿ ಭಾಗವಹಿಸಿ, ಎಲ್ಲಾ ಸ್ಪರ್ದಾಳುಗಳಿಗೆ ಶುಭ ಕೋರಿ, ಆರ್ಯವೈಶ್ಯ ಸಮಾಜದವರು ಸಾರ್ವಜನಿಕರಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅನುಕರಣೀಯ ಎಂದರು.
ಆಯೋಜಕರಾದ ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ರಾಧಿಕಾ ಜಗದೀಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ಈಶ್ವರ್ ಭೂದಾಳ್ ಹಾಗೂ ಅವೋಪ ಅಧ್ಯಕ್ಷರಾದ ಎಚ್. ಜಿ. ದತ್ತ ಕುಮಾರ್ ಹಾಗೂ ಆರ್ಯ ಸಮಾಜದ ಅನೇಕ ಗಣ್ಯರು ಮತ್ತು ಅನೇಕ ಸಾರ್ವಜನಿಕ ಮುಖಂಡರು ಭಾಗವಹಿಸಿದ್ದರು.
ಬಹುಮಾನ ವಿಜೇತರು:
ಅಪ್ಪ ಮಗ ವಿಭಾಗದಲ್ಲಿ ಯುವಜನ ಸೇವಾ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಮತ್ತು ಅದ್ವೈತ್ ಕ್ರಿಯಾಂಶ ಇವರಿಗೆ ಹಾಗೂ ಅತ್ಯಾಕರ್ಷಕ ಗಾಳಿಪಟ ವಿಭಾಗದಲ್ಲಿ ರಾಜೇಶ್ ಮತ್ತು ಸಿಂಧು ಹಾಗೂ ಅತಿ ಎತ್ತರಕ್ಕೆ ಹಾರಿದ ಗಾಳಿಪಟ ವಿಭಾಗದಲ್ಲಿ ಇಸ್ಮಾಯಿಲ್ ಮತ್ತು ಸೈಯದ್ ಪೈಜಾನ್ ಹಾಗೂ ಅತಿ ದೂರಕ್ಕೆ ಹಾರಿದ ಗಾಳಿಪಟ ವಿಭಾಗದಲ್ಲಿ ಸತೀಶ್ ಮತ್ತು ವಿಸ್ಮಿತ್ ಇವರುಗಳಿಗೆ ನಗದು ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
Also read: ನೀರಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿದ ಪೇಜಾವರ ಶ್ರೀ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post