ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೋರ್ವರು ನಾಲ್ವರು ಮಕ್ಕಳೊಂದಿಗೆ ಅನುಮಾಸ್ಪದವಾಗಿ ಇರುವುದನ್ನು ಕಂಡುಬಂದಿದ್ದು, ಮಹಿಳೆಯು ಯಾವುದೇ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತಾಯಿ ಮತ್ತು ನಾಲ್ವರು ಮಕ್ಕಳನ್ನು ಮಕ್ಕಳ ಸಹಾಯವಾಣಿ Child Helpline ಡಿಸಿಪಿಯುಗೆ ಹಸ್ತಾಂತರಿಸಲಾಗಿದೆ.
ಮೇ.24ರಂದು ಪಿಸಿ/ಎಸ್‌ಎಂಇಟಿ ಬಿ. ಎನ್. ಕುಬೇರಪ್ಪ ಮತ್ತು ಸಿಬ್ಬಂದಿ ಎಸ್‌ಎಂಇಟಿ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ನಾಲ್ವರು ಅಪ್ರಾಪ್ತ ಮಕ್ಕಳ ಜೊತೆಗೆ ಮಹಿಳೆಯೊಬ್ಬರು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿರುವುದನ್ನು ಗಮನಿಸಿ, ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಸುಮಾರು ೬ ವರ್ಷ ವಯಸ್ಸಿನ ಒಬ್ಬ ಹುಡುಗಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆಯ ಹೆಸರು ಸಿಮ್ಮಿ ಮತ್ತು ಅವಳ ತಾಯಿಯ ಹೆಸರು ಕವಿತಾ ಎಂದು ಉತ್ತರಿಸಿದ್ದು, ಇತರ ಇಬ್ಬರು ಸಹೋದರಿಯರ ಹೆಸರು ಗುಂಜನ್ (5), ದೀಕ್ಷಾ (4) ಮತ್ತು ರಾಜ್ (3) ಎಂದು ತಿಳಿದುಬಂದಿದೆ.
ಬಹಳ ದಿನಗಳಿಂದ ಮನೆ ಬಿಟ್ಟಿದ್ದು, ಆಕೆಯ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದಾರೆ. ಮತ್ತು ಉತ್ತರಪ್ರದೇಶದ ಮನಕಪುರದ ಚನಾಪುರ ಠಾಣೆಗೆ ಸೇರಿದವರು, ಅವರ ತಂದೆ ಹೆಸರು ನರ್ಪಾಲ್, ಇವರು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಿ. ಆಕೆಯ ತಾಯಿ ಪ್ರತಿ ಬಾರಿಯೂ ಹಣ ಮತ್ತು ಬಟ್ಟೆ ತೆಗೆದುಕೊಂಡು ತಂದೆಗೆ ತಿಳಿಸದೆ ಮನೆಯಿಂದ ಹೊರಡುತ್ತಿದ್ದಳು. ಆಕೆಯ ತಂದೆ ಪ್ರತಿ ಬಾರಿಯೂ ಅವರನ್ನು ಸುರಕ್ಷಿತವಾಗಿಡಲು ಪ್ರಯತ್ನಿಸುತ್ತಿದ್ದರೂ, ಮಾನಸಿಕವಾಗಿ ವಿಚಲಿತರಾದ ಆಕೆಯ ತಾಯಿ ಎಲ್ಲಾ ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಮನೆಯಿಂದ ಬೇರೆಡೆಗೆ ಹೋಗುತ್ತಿದ್ದರು ಎಂದು ಮಾಹಿತಿ ನೀಡಿದ್ದಾಳೆ.
ಮಕ್ಕಳು ತಂದೆಯ ಬಳಿಗೆ ಹೋಗಲು ಬಯಸುತ್ತಿದ್ದು, ಅಪ್ರಾಪ್ತ ಮಕ್ಕಳು ಮತ್ತು ಮಾನಸಿಕ ಅಸ್ವಸ್ಥ ತಾಯಿಯ ಸುರಕ್ಷತೆಯ ದೃಷಿಯಿಂದ ಅಗತ್ಯ ಕ್ರಮ ಕೈಗೊಳ್ಳ ಅವರನ್ನು ಮಕ್ಕಳ ಸಹಾಯವಾಣಿ ಶಿವಮೊಗ್ಗ ಮತ್ತು ಡಿಸಿಪಿಯು ಶಿವಮೊಗ್ಗಕ್ಕೆ ಹಸ್ತಾಂತರಿಸಲಾಗಿದೆ.
Also read: ಐದು ರೂಪಾಯಿ ಡಾಕ್ಟರ್ ಖ್ಯಾತಿಯ ಶಂಕರೇಗೌಡರಿಗೆ ಲಘು ಹೃದಯಾಘಾತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post