ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನಿಂದ ಶಿವಮೊಗ್ಗಕ್ಕೆ 11 ಗಂಟೆಗೆ ಬರಬೇಕಾಗಿದ್ದ ಇಂಡಿಗೋ ವಿಮಾನ ಇಂದು ತಡವಾಗಿ 12-30ಕ್ಕೆ ಬಂದಿದೆ. ಮತ್ತೆ ಬೆಂಗಳೂರಿಗೆ ವಾಪಾಸು 2 ಗಂಟೆಗೆ ಟೇಕಾಫ್ ಆಗಲಿದೆ ಎಂದು ಮಾಹಿತಿ ನೀಡಿದ ಅಧಿಕಾರಿಗಳು ಪ್ರಯಾಣಿಕರನ್ನು ಬಸ್ಸಿನಲ್ಲಿ ಸುಮಾರು 3 ಗಂಟೆಗಳ ಕಾಲ ಕಾಯಿಸಿ ಬಳಿಕ 2 ಗಂಟೆ ಸುಮಾರಿಗೆ ಶಿವಮೊಗ್ಗ-ಬೆಂಗಳೂರು ವಿಮಾನ ತಾಂತ್ರಿಕ ದೋಷದಿಂದಾಗಿ ರದ್ದುಪಡಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಇದರಿಂದ ವಿದೇಶಗಳಿಗೆ ಬೆಂಗಳೂರು ಮೂಲಕ ತೆರಳಬೇಕಾಗಿದ್ದ ಕೆಲವು ಪ್ರಯಾಣಿಕರು ವಿಮಾನ ಯಾನ ಸಂಸ್ಥೆಯ ಮತ್ತು ಶಿವಮೊಗ್ಗ ಏರ್‍ಪೋರ್ಟ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಇದು ನನಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಎರಡನೇ ಅನುಭವ. ನಾನೀಗ ಟ್ಯಾಕ್ಷಿಯಲ್ಲಿ ತುರ್ತಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ. ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

Also read: ನಮ್ಮೆಲ್ಲರ ಜೀವನದಲ್ಲಿ ನಿತ್ಯೋತ್ಸವವಾಗಲಿ ಕನ್ನಡ: ಯೋಗ ಶಿಕ್ಷಕ ಜಿ.ಎಸ್. ಓಂಕಾರ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news