ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಣಕಾಸಿನ ವಿಚಾರವಾಗಿ ಮಿತ್ರನನ್ನು ಗಾಜನೂರಿನ ಇಂದಿರಾನಗರ ಚಾನೆಲ್ ಬಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಗಾಜನೂರು ಇಂದಿರಾನಗರದ ವಾಸಿಗಳಾದ ಉಮೇಶ್ (30), ಸುರೆಂದ್ರ (30), ಶಿವಶಂಕರ್ (24), ಲೋಕೇಶಪ್ಪ (35) ಇವರು ಶಿಕ್ಷೆಗೆ ಒಳಗಾದವರು.

ಘಟನೆ ವಿವರ:
2013ರ ಮೇ 29ರಂದು ನಡೆದಿತ್ತು. ರಾಘವೇಂದ್ರ ಮತ್ತು ದುರ್ಗಪ್ಪ ಇಬ್ಬರೂ ಗಾಜನೂರಿನ ಇಂದಿರಾನಗರದವರಾಗಿದ್ದು ಹಣಕಾಸಿನ ವಿಚಾರವಾಗಿ ದ್ವೇಷವಿತ್ತು. ರಾಘವೇಂದ್ರನು ಮೇ 29ರ ರಾತ್ರಿ ಚಾನೆಲ್ ಬಳಿ ನಡೆದುಕೊಂಡು ಬರುತ್ತಿರುವಾಗ ದುರ್ಗಪ್ಪನು ಈಗ ಶಿಕ್ಷೆಗೊಳಗಾದ ತನ್ನ ನಾಲ್ವರು ಸ್ನೇಹಿತರೊಡನೆ ಬಂದು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದನು. ಇದರಿಂದ ರಾಘವೇಂದ್ರ ಮೃತನಾಗಿದ್ದನು. ಈ ಬಗ್ಗೆ ದೂರು ದಾಖಲಾಗಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. 2ನೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈ ನಾಲ್ವರಿಗೂ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಜೊತೆಗೆ ತಲಾ 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ವಿಫಲರಾದಲ್ಲಿ ಮತ್ತೆ 6 ತಿಂಗಳು ಜೈಲುವಾಸ ಎದುರಿಸಬೇಕೆಂದು ತೀರ್ಪಿನಲ್ಲಿ ವಿವರಿಸಲಾಗಿದೆ.
Also read: ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾಮಗಾರಿ ಮುಕ್ತಾಯವಾಗೋದು ಯಾವಾಗ? ಪಾಲಿಕೆ ಆಯುಕ್ತರು ಏನೆನ್ನುತ್ತಾರೆ?

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















