ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ನಾರಾಯಣ ಹೆಲ್ತ್, #Narayana Health ಕೇಂದ್ರ ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಭಾಗವಾಗಿ ಸೆ.17ರಂದು ಒಂದೇ ದಿನದಲ್ಲಿ ತನ್ನ 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ 11,786 ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ದಾಖಲೆ ಬರೆದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ #PM Narendra Modi ಅವರು ದೇಶದ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಸೆಪ್ಟೆಂಬರ್ 17ರಂದು ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನವನ್ನು ಆರಂಭಿಸಿದರು. ಈ ಯೋಜನೆಗೆ ಕೈ ಜೋಡಿಸಿದ ನಾರಾಯಣ ಹೆಲ್ತ್ ಈ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಜೊತೆ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆಲಸ ಮಾಡಬೇಕಾದ ಮಹತ್ವವನ್ನು ಸಾರಿದೆ.
ನಾರಾಯಣ ಹೆಲ್ತ್ ನ ಈ ಅಭಿಯಾನದಲ್ಲಿ ಮಹಾನಗರಗಳಿಂದ ಹಿಡಿದು 2ನೇ ಮತ್ತು 3ನೇ ಹಂತದ ನಗರಗಳ ಮಹಿಳೆಯರು ಕೂಡ ಉತ್ಸಾಹದಿಂದ ಭಾಗವಹಿಸಿದರು. ನಾರಾಯಣ ಹೆಲ್ತ್ ನ ಆಸ್ಪತ್ರೆಗಳು, ಹಾರ್ಟ್ ಸೆಂಟರ್ ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ ತೆರೆದಿದ್ದು, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಯಾವುದೇ ತೊಡಕು ಉಂಟಾಗದ ರೀತಿಯಲ್ಲಿ ಇಸಿಜಿ ಪರೀಕ್ಷೆಯನ್ನು ನಡೆಸಲಾಯಿತು.
ವಿಶೇಷವೆಂದರೆ ಸಹ್ಯಾದ್ರಿ ನಾರಾಯಣ ನಲ್ಲಿ ಒಂದೇ ದಿನದಲ್ಲಿ350 ಸಂಖ್ಯೆಯ ಇಸಿಜಿ ಪರೀಕ್ಷೆಗಳು ನಡೆಯಿತು.
ಈ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು, “ಒಂದೇ ದಿನದಲ್ಲಿ 10,000 ಇಸಿಜಿ ಪರೀಕ್ಷೆ ನಡೆಸಿದ್ದು ನಮಗೆ ಖುಷಿ ಕೊಟ್ಟಿದೆ. ಐದು ಸಾವಿರ ಅನ್ನುವುದು ಕೇವಲ ಸಂಖ್ಯೆಯಲ್ಲ, ಬದಲಿದೆ ಇದು ಹೃದಯದ ಆರೋಗ್ಯ ಪಾಲಿಸುವುದು ಮುಖ್ಯ ಎಂದು ಅರಿತುಕೊಂಡು ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಮಹಿಳೆಯರ ಯಶಸ್ಸು. ನಾರಾಯಣ ಹೆಲ್ತ್ ನಲ್ಲಿ ನಾವು ರೋಗ ತಡೆಗಟ್ಟುವ ಚಿಕಿತ್ಸೆಯೇ ಆರೋಗ್ಯವಂತ ರಾಷ್ಟ್ರದ ಅಡಿಪಾಯ ಎಂದು ನಂಬಿದ್ದೇವೆ ಮತ್ತು ಆ ನಂಬಿಕೆಗೆ ಪೂರಕವಾಗಿ ಸ್ವಸ್ಥ ನಾರಿ, ಸಶಕ್ತ ಪರಿವಾರ ಯೋಜನೆ ಮೂಡಿ ಬಂದಿದೆ” ಎಂದು ಹೇಳಿದರು.
ನಾರಾಯಣ ಹೆಲ್ತ್ ನ ಗ್ರೂಪ್ ಸಿಇಓ ಡಾ. ಇಮ್ಯಾನುಯೆಲ್ ರೂಪರ್ಟ್ ಅವರು ಮಾತನಾಡಿ, “ದೇಶಾದ್ಯಂತ ನಾವು ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ರೋಗ ತಡೆಗಟ್ಟುವ ಚಿಕಿತ್ಸೆಯ ಕುರಿತು ಜಾಗೃತಿ ಹೆಚ್ಚುತ್ತಿರುವುದಕ್ಕೆ ಈ ಅದ್ಭುತ ಪ್ರತಿಕ್ರಿಯೆಯೇ ಸಾಕ್ಷಿಯಾಗಿದೆ. ಈ ಮೂಲಕ ನಾವು ಕೇವಲ ಪ್ರಮುಖ ನಗರಗಳ ಮಹಿಳೆಯರನ್ನು ಮಾತ್ರವೇ ತಲುಪಿಲ್ಲ, ಬದಲಿಗೆ ಚಿಕ್ಕ ಪಟ್ಟಣಗಳ ಮಹಿಳೆಯರೂ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಾಡಿದ್ದೇವೆ. 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿನ ನಮ್ಮ ತಂಡಗಳು ಈ ಯೋಜನೆಯನ್ನು ಯಶಸ್ವಿಗೊಳಿಸಲು ದಣಿವರಿಯದೆ ಶ್ರಮಿಸಿವೆ. ಈ ಯಶಸ್ಸು ನಾರಾಯಣ ಹೆಲ್ತ್ ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ” ಎಂದು ಹೇಳಿದರು.
ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಶೇ.25ರಷ್ಟು ಸಾವುಗಳು ಉಂಟಾಗುತ್ತಿದ್ದು, ಇದರಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿಯ ಪ್ರಕಾರ ಭಾರತದ ಮಹಿಳೆಯರಲ್ಲಿ ಉಂಟಾಗುತ್ತಿರುವ ಸಾವಿಗೆ ಹೃದಯ ಕಾಯಿಲೆಯೇ ಪ್ರಮುಖ ಕಾರಣವಾಗಿದೆ. ಶೇ.18ರಷ್ಟು ಮಹಿಳೆಯರು ಹೃದಯ ಸಮಸ್ಯೆಯಿಂದ ಇಹಲೋಕ ತ್ಯಜಿಸುತ್ತಿದ್ದಾರೆ. ಹೀಗಾಗಿ ಮಹಿಳೆಯರ ಆರೋಗ್ಯ ರಕ್ಷಣೆ ಕಡೆಗೆ ಗಮನ ಹರಿಸಿರುವ ನಾರಾಯಣ ಹಾಸ್ಪಿಟಲ್ ಈ ಮಹತ್ವದ ಕ್ರಮ ಕೈಗೊಂಡಿದೆ.
ಉಚಿತ ಇಸಿಜಿ ಅಭಿಯಾನವು ನಾರಾಯಣ ಹೆಲ್ತ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. 2023ರಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು ಒಂದೇ ಸ್ಥಳದಲ್ಲಿ 24 ಗಂಟೆಗಳಲ್ಲಿ 3,797 ಇಸಿಜಿಗಳನ್ನು ನಡೆಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತ್ತು. ಇದೀಗ ನಾರಾಯಣ ಹೆಲ್ತ್ ತನ್ನ ದಾಖಲೆಯನ್ನು ತಾನೇ ಮುರಿದು ಹೊಸ ದಾಖಲೆ ಬರೆದಿದೆ.
ನಾರಾಯಣ ಹೆಲ್ತ್ ಕುರಿತು:
ಡಾ. ದೇವಿ ಶೆಟ್ಟಿ ಸ್ಥಾಪಿಸಿರುವ ನಾರಾಯಣ ಹೆಲ್ತ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಈ ಸಂಸ್ಥೆಯು ಜಾಗತಿಕ ಮಟ್ಟದ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್ತ್ ಸಂಸ್ಥೆಯು ಭಾರತ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಬಹಳ ಪ್ರಸಿದ್ಧವಾಗಿದೆ. ಸಂಸ್ಥೆಯು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಗುಣಮಟ್ಟದ ಕೇಂದ್ರಗಳು ಮತ್ತು 18,822ರಷ್ಟು ವೃತ್ತಿಪರರ ತಂಡವನ್ನು ಹೊಂದಿದೆ. ಇದರಲ್ಲಿ 3,868 ನುರಿತ ವೈದ್ಯರು ಮತ್ತು ತಜ್ಞರು ಇದ್ದಾರೆ. ಅತ್ಯುತ್ತಮ ಸೌಲಭ್ಯ ಮತ್ತು ತಂಡಗಳ ಮೂಲಕ ಉತ್ಕೃಷ್ಟ ಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿದೆ.
ನಾರಾಯಣ ಒನ್ ಹೆಲ್ತ್ (ಎನ್‌ಎಚ್ ಇಂಟಿಗ್ರೇಟೆಡ್ ಕೇರ್) ಮತ್ತು ನಾರಾಯಣ ಹೆಲ್ತ್ ಇನ್ಶೂರೆನ್ಸ್ ಇವು ನಾರಾಯಣ ಹೆಲ್ತ್ ನ ಅಂಗಸಂಸ್ಥೆಗಳಾಗಿವೆ.
ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.narayanahealth.org/
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post