ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಅರಣ್ಯ ಇಲಾಖೆ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಐದೃಷ್ಟಿ ಕಣ್ಣಿನ ಆಸ್ಪತ್ರೆ ಇವರ ಸಹಯೋಗದೊಂದಿಗೆ ಇಲಾಖೆ ಅಧಿಕಾರಿ, ಸಿಬ್ಬಂದಿ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ, ಜನರಲ್ ಪಿಜಿಷಿಯನ್ ಡಾ. ಶೂನ್ಯ ಸಂಪದ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಶಾಂತಲಾ, ಮೂಳೆ ರೋಗ ತಜ್ಞರಾದ ಡಾ. ರೂಪೇಶ್ , ದಂತ ತಜ್ಞರಾದ ಡಾ. ಅರುಣ್ ಕುಮಾರ್, ಡಾ. ಸಿದ್ದಾರ್ಥ್ ಅವರು ರೋಗಿಗಳಿಗೆ ತಪಾಸಣೆ ನಡೆಸಿ, ಸಲಹೆ ಸೂಚನೆ ನೀಡಿದರು.ಆಸ್ಪತ್ರೆಯ ದಾದಿಯರು ಹಾಗೂ ಸಿಬ್ಬಂದಿ ಹಾಜರಿದ್ದರು. ಇದೇ ಸಂದರ್ಭ ಔಷಧಿ ವಿತರಿಸಲಾಯಿತು.











Discussion about this post