ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್’ಗಳಿಗೆ ಜನರು ಹಾಗೂ ಸಂಘ-ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಅಂತೆಯೇ, ಶಿವಮೊಗ್ಗ ನಂದಿ ಪೆಟ್ರೋಲ್ ಬಂಕ್ ಮಾಲೀಕ ಕಿರಣ್ ಇದೇ ಹಾದಿಯಲ್ಲಿ ವಿಭಿನ್ನ ಹೆಜ್ಜೆಯಿಟ್ಟಿದ್ದು, ಪೆಟ್ರೋಲ್ ದಾನ ಮಾಡಿದ್ದಾರೆ.
ಜನರನ್ನು ರಕ್ಷಿಸಲು ತಮ್ಮ ಕುಟುಂಬಗಳಿಂದ ದೂರವೇ ಉಳಿದಿರುವ, ತಮ್ಮ ಕಷ್ಟ ಮರೆತು ಜನರ ಕಷ್ಟಗಳ ನಿವಾರಣೆಯಲ್ಲಿ ತೊಡಗಿರುವ 22 ಪೊಲೀಸ್ ಚೀತಾ ವಾಹನಗಳಿಗೆ ತಲಾ 3 ಲೀಟರ್ ನಂತೆ 66 ಲೀಟರ್ ಪೆಟ್ರೋಲನ್ನು ದಾನವಾಗಿ ನೀಡಿದ್ದಾರೆ.
ಇಂದು ಮುಂಜಾನೆ ತಮ್ಮ ಬಂಕ್’ನಲ್ಲಿ ಈ ಎಲ್ಲ ವಾಹನಗಳಿಗೆ ಪೆಟ್ರೋಲ್ ತುಂಬಿಸಿದ್ದು, ಈ ಮೂಲಕ ಕೊರೋನಾ ವಾರಿಯರ್ಸ್’ಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂತಹ ಒಂದು ವಿಭಿನ್ನ ಹೆಜ್ಜೆಯಿಟ್ಟಿರುವ ಬಂಕ್ ಮಾಲೀಕ ಕಿರಣ್ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.
Get in Touch With Us info@kalpa.news Whatsapp: 9481252093















