ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಜಿಟಲ್ ತಂತ್ರಜ್ಞಾನದಿಂದಾಗಿ Digital Technology ಸಾಂಪ್ರದಾಯಿಕ ಮುದ್ರಣಕ್ಕೆ ಭಾರೀ ಹಿನ್ನಡೆಯಾಗಿದ್ದು, ಈ ಉದ್ಯಮ ಉಳಿಸುವ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಬೇಕಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ, ಲೆಕ್ಕಪರಿಶೋಧಕ ಕೆ.ವಿ. ವಸಂತ ಕುಮಾರ್ ಹೇಳಿದರು.
ಮಲೆನಾಡು ಮುದ್ರಕರ ಸಂಘದ Malenaadu Printing Association ವತಿಯಿಂದ ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮುದ್ರಕರ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗಿದೆ. ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾದವರು ಮಾತ್ರ ಬೆಳೆಯುವಂತಾಗಿದೆ ಎಂದರು.

Also read: ನಟ ಯಶ್ ಕಟೌಟ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಮೂವರ ಸಾವು
ಪುರುಷರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಪ್ರೊ. ಕೆ.ಜಿ.ವೆಂಕಟೇಶ್, ನಾನು ಸಹ ಮುದ್ರಣ ಕಚೇರಿಯಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ಕಷ್ಟಗಳೇನೆಂಬುದು ಗೊತ್ತಿದೆ. ಅಂತಹ ಕಷ್ಟಗಳನ್ನು ಒಂದು ದಿನದಮಟ್ಟಿಗಾದರೂ ಮರೆಯಲು ಇಂತ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದರು.

ಹಿರಿಯ ಪತ್ರಕರ್ತ, ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕ ಎಸ್.ಚಂದ್ರಕಾಂತ್‌ರವರು ಮಾತನಾಡಿ, ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡು, ದರ ಪೈಟೋಟಿ ನಡೆಸದೆ ಮುದ್ರಣಕಾರರು ಒಗ್ಗಟ್ಟಿನಿಂದ ಏಕರೂಪದ ದರ ನಿಗದಿಪಡಿಸಿಕೊಂಡು ವ್ಯವಹರಿಸಬೇಕು ಎಂದರು.
ಮಲೆನಾಡು ಮುದ್ರಕ ಸಂಘದ ಅಧ್ಯಕ್ಷ ಎಂ. ಮಾಧವಾಚಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಮುದ್ರಣಕಾರರಿಗೆ, ಹಿರಿಯ ಮುದ್ರಣ ಕಾರ್ಮಿಕರಿಗೆ, ರಕ್ತದಾನಿ ಮುದ್ರಣಕಾರರಿಗೆ ಹಾಗೂ ಮುದ್ರಣಕಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೇರವೇರಿಸಿದರು.

ಬೆಂಗಳೂರಿನ ಸವಿಗಾನ ತಂಡದಿಂದ ‘ಮೆಲ್ಲುಸಿರೇ ಸವಿಗಾನ’ ಎಂಬ ವಿಶೇಷ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ ಏರ್ಪಾಡಾಗಿತ್ತು. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಸವಿಗಾನ ತಂಡದವರಿಂದ ಮೆಲ್ಲುಸಿರೇ ಸವಿಗಾನ-ಕನ್ನಡ ಹಳೆಯ ಚಿತ್ರಗೀತೆಗಳ ಸುಮಧುರ ಗಾಯನ ಕಾರ್ಯಕ್ರಮ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post