ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮಾ.1ರಿಂದ 3ರವರೆಗೆ ರವೀಂದ್ರ ನಗರದ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ದಿ. ಅ.ಪ. ರಾಮ ಭಟ್ಟರ ಸ್ವರಣಾರ್ಥವಾಗಿ ಭಗವದ್ಗೀತಾ ಭಕ್ತಿಯೋಗ ಉಪನ್ಯಾಸ ಕಾರ್ಯಕ್ರಮವನ್ನು ಪ್ರತಿದಿನ ಸಂಜೆ 6-30ರಿಂದ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ಕೇಶವಮೂರ್ತಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಕ್ತಿಯೋಗದ ಉಪನ್ಯಾಸವನ್ನು ಆಯನೂರು ಮಧುಸೂದನ ಆಚಾರ್ ನಡೆಸಿಕೊಡುತ್ತಾರೆ. ಇದರ ಜೊತೆಗೆ ಪ್ರತಿದಿನ ಸಂಜೆ 5ರಿಂದ 6ರವರೆಗೆ ಮಹಿಳೆಯರಿಂದ ಲಕ್ಷ್ಮೀ ಸೋಭಾನೆ, ಸೌಂದರ್ಯಲಹರಿ, ಮುಕುಂದ ಮಾಲಾ ಪಠಣವಿರುತ್ತದೆ ಎಂದರು.
ಇದರ ಉದ್ಘಾಟನಾ ಕಾರ್ಯಕ್ರಮವನ್ನು ಮಾ.1ರಂದು ಸಂಜೆ 6ಗಂಟೆಗೆ ಶಾಸಕ ಕೆ.ಎಸ್. ಈಶ್ವರಪ್ಪ ನೆರವೇರಿಸುವರು. ಡಾ. ಧನಂಜಯ ಸರ್ಜಿ ಉಪಸ್ಥಿತರಿರುವರು. ಮಾ.3ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸಮಾರೋಪ ನುಡಿಗಳನ್ನಾಡುವರು. ಸಂಘದ ಸಂಸ್ಥಾಪಕ ಅಧ್ಯಕ್ಷ ಆರ್. ಅಚ್ಯುತರಾವ್ ಉಪಸ್ಥಿತರಿರುವರು ಎಂದರು.
Also read: ಫೆ.26ರಂದು ತುರಬ ಕಟ್ಟುವ ಹದನ ನಾಟಕ ಪ್ರದರ್ಶನ
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘವು 2004ರಲ್ಲಿ ಆರಂಭವಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಮೂಲಕ ಆರ್ಥಿಕ ಸಹಾಯ ನೀಡುತ್ತಿದೆ. ವಧುವರರ ಸಮಾವೇಶ ನಡೆಸಿದೆ. ವಿಪ್ರ ಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ಕ್ರಿಕೆಟ್ ಪಂದ್ಯಾವಳಿ ನಡೆಸಿದೆ. ಹಿರಿಯ ದಂಪತಿಗಳ ಸನ್ಮಾನಿಸಿದೆ. ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದೀಗ ಭಕ್ತಿಯೋಗದ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಆರ್. ಅಚ್ಯುತ ರಾವ್, ಪದಾಧಿಕಾರಿಗಳಾದ ಯು.ಎಸ್.ಕೇಶವಮೂರ್ತಿ, ಹೆಚ್.ಸಿ. ರವಿಕುಮಾರ್, ಡಿ.ಕೆ. ವೆಂಕಟೇಶಮೂರ್ತಿ, ಎಸ್.ಎಸ್. ಪ್ರಸಾದ್, ಮಂಜುನಾಥ್, ವಿಶ್ವನಾಥ್, ನಾಗೇಶ್, ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post