ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯ ದಸರಾ #Dasara ಉತ್ಸವ ಸಮಿತಿಯು ಕರ್ನಾಟಕ ಗಮಕ ಕಲಾ ಪರಿಷತ್ ಶಿವಮೊಗ್ಗ ಸಹಯೋಗದೊಂದಿಗೆ ಸೆ.28ರಂದು ಕಮಲಾ ನೆಹರೂ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 7.30ರವರೆಗೆ ಗಮಕ ದಸರಾವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಗಮಕ ಪರಿಷತ್‍ನ ಜಿಲ್ಲಾಧ್ಯಕ್ಷ ಹೆಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರೀ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಮಕ ದಸರಾವನ್ನು ಮೈಸೂರಿನ ಹಿರಿಯ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆವಹಿಸಲಿದ್ದಾರೆ. ಆಯುಕ್ತ ಮಾಯಣ್ಣಗೌಡ, ಗಮಕ ದಸರಾ ಸಂಚಾಲಕಿ ಅನುಪಮಾ ಭಟ್ ಇನ್ನಿತರರು ಉಪಸ್ಥಿತರಿರುವರು ಎಂದರು.
ಬೆಳಿಗ್ಗೆ 10.30ರಿಂದ ಗಮಕವಾಚನ-ವ್ಯಾಖ್ಯಾನ, ಗಮಕ ವಿಚಾರಗೋಷ್ಠಿ, ಉದಯೋನ್ಮುಖ ಗಮಕಿಗಳಿಂದ ಗಮಕವಾಚನ-ವ್ಯಾಖ್ಯಾನ, ರಾಜ್ಯಮಟ್ಟದ ಗಮಕವಾಚನ ಸ್ಪರ್ಧೆ, ಕವಿಕಾವ್ಯ ಪರಿಚಯ, ಗಮಕ ರಸಪ್ರಶ್ನೆ, ಕಾವ್ಯಾಲಂಕಾರ ರಸಧಾರೆ, ಗಮಕವಾಚನ, ವ್ಯಾಖ್ಯಾನ ಕಾರ್ಯಕ್ರಮ-2 ನಡೆಯಲಿದೆ.
ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಾಗರದ ಹಿರಿಯ ವ್ಯಾಖ್ಯಾನಕಾರ ಕೆ.ಆರ್. ಕೃಷ್ಣಯ್ಯ, ಶಾಸಕ ಎಸ್.ಎನ್. ಚನ್ನಬಸಪ್ಪ, ಆಯುಕ್ತ ಮಾಯಣ್ಣಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕುಮಾರ ವ್ಯಾಸ ಪ್ರಶಸ್ತಿ ಪುರಸ್ಕøತರಾದ ರಾಜಾರಾಮಮೂರ್ತಿ ಹಾಗೂ ಇನ್ನಿತರರು ಆಗಮಿಸಲಿದ್ದು, ಗಮಕ ಪರಿಷತ್‍ನ ಜಿಲ್ಲಾ ಉಪಾಧ್ಯಕ್ಷೆ ಶ್ರೀಲಕ್ಷ್ಮೀ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟಿ.ಆರ್. ಅಶ್ವತ್ಥ್ ನಾರಾಯಣಶೆಟ್ಟಿ, ಕುಮಾರಶಾಸ್ತ್ರಿ, ಶ್ರೀಲಕ್ಷ್ಮೀ ಶಾಸ್ತ್ರಿ, ರಾಮಗೋಪಾಲ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post