ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯನ್ನು ಬೇರುಮಟ್ಟದಿಂದ ಕಟ್ಟಿ ಬೆಳೆಸಿದ ಕೆ.ಎಸ್. ಈಶ್ವರಪ್ಪನವರಿಗೆ ಈ ಬಾರಿಯೂ ಸಹ ಟಿಕೇಟ್ ನೀಡಬೇಕು, ಇಲ್ಲದಿದ್ದಲ್ಲಿ ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಟಿಕೇಟ್ ನೀಡಿ ಎಂದು ಜಿಲ್ಲಾ ಬೇಡ ಜಂಗಮ ಕಾರ್ಯದರ್ಶಿ ಕೆ.ಆರ್. ಸೋಮನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆರೋಪವಿರುವ ಹಲವು ಮಂದಿಗೆ ಟಿಕೇಟ್ ನೀಡಲಾಗಿದೆ. ಪ್ರಮುಖವಾಗಿ, ಆರೋಪವಿರುವ ನಿವೃತ್ತ ಐಎಎಸ್ ಅಧಿಕಾರಿ ನಾಗರಾಜ್, ಮೊಟ್ಟೆ ಹಗರಣದಲ್ಲಿ ಭಾಗಿಯಾದ ಶಶಿಕಲಾ ಜೊಲ್ಲೆಗೆ ಟಿಕೇಟ್ ನೀಡಲಾಗಿದೆ. ಕುಟುಂಬದವರಿಗೆ ಟಿಕೇಟ್ ನೀಡುವುದಿಲ್ಲ ಎಂಬುದಾದರೆ ಆನಂದ್ ಸಿಂಗ್ ಮಗನಿಗೆ ಟಿಕೇಟ್ ನೀಡಿರುವುದು ಏಕೆ? ಎಂದು ಪ್ರಶ್ನಿಸಿದ ಅವರು, ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿ ಹಾಕಿಕೊಂಡಿರುವ ಯಡಿಯೂರಪ್ಪನವರ ಕುಟುಂಬಕ್ಕೂ ಟಿಕೇಟ್ ನೀಡಲಾಗಿದೆ. ಹಾಗಾಗಿ ಈಶ್ವರಪ್ಪನವರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೇಟ್ ನಿರಾಕರಿಸಬಾರದು ಎಂದರು.
Also read: ವಿಧಾನಸಭಾ ಚುನಾವಣೆ ಹಿನ್ನೆಲೆ ಪಂಜಿನ ಮೆರವಣಿಗೆ ನಡೆಸಿ ಜಾಗೃತಿ ಅಭಿಯಾನ












Discussion about this post