ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಭಾನುವಾರ ಕುವೆಂಪು ರಂಗಮಂದಿರದಲ್ಲಿ ವಿಪ್ರ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ವಿದ್ಯಾನಿಧಿ, ಸುರ್ವ ದಾಂಪತ್ಯ ಸನ್ಮಾನ-ಪ್ರತಿಭಾ ಪುರಸ್ಕಾರ, ಸಂಘದ ಹಿರಿಯ ನಿರ್ದೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಅತ್ಯಂತ ಪವಿತ್ರ ಕಾರ್ಯ. ಸಾಧಕರಿಗೆ ಬೆನ್ನು ತಟ್ಟುವ ಕಾರ್ಯ. ಸಮಾಜಕ್ಕೆ ಬೇಕಸದ ವ್ಯಕ್ತಿಗಳ ನಿರ್ಮಾಣ, ಅವಶ್ಯಕತೆಗಿಂತ ಹೆಚ್ಚು ವಿದ್ಯೆ ಕಲಿತಾಗ ಅಜೀರ್ಣನೂ ಆಗುತ್ತದೆ. ಈಗ ಎಐ ಕಡೆ ವಿದಗಯಾರ್ಥಿಗಳು ವಾಲುತ್ತಿದ್ದಾರೆ. ಇದು ಎಷ್ಟು ಅನುಕೂಲಕರವೋ ಅಷ್ಟೇ ಆಘಾತಕಾರಿಯಾಗಿದೆ. ಎಐ ಮೂಲಕ ಪ್ರಥಮ ಕ್ರೈಂ ಆಗಿದ್ದು ಕರ್ನಾಟಕದಲ್ಲಿ ಎಂಬುದನ್ನು ನೆನಪಿಸಿದರು. 21ನೇ ಶತಮಾನದಲ್ಲಿ ನಾವೆಲ್ಲ ಓಡುತ್ತಿದ್ದೇವೆ. ಮಕ್ಕಳಿಗೆ ಸಂಸ್ಕಾರ ನೀಡಬೇಕು. ಶಿವಮೊಗ್ಗ ಶಿಕ್ಷಣ ಕ್ಷೇತ್ರದ ಪ್ರಮುಖ ಕೇಂದ್ರವಾಗಿದೆ.

ವಿದ್ಯಾನಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು ಸ್ವಂತ ಆದಾಯ ಬರಲಾರಂಭಿಸಿದಾಗ ಅದನ್ನು ವಾಪಸ್ ತಮ್ಮ ಸಮಾಜಕ್ಕೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಇಡೀ ದೇಶದ ಸಮಾಜಕ್ಕೆ ಸರಿಯಾದ ದಿಕ್ಕು ತೋರಿಸಿದ ಸಮುದಾಯವೇ ವಿಪ್ರ ಸಮುದಾಯ. ದೇಶಕ್ಕೆ ಶಕ್ತಿ ತುಂಬಿದ್ದೇ ವಿಪ್ರ ಸಮಾಜ ಎಂದರು.

ತಾಲೂಕು, ಜಿಲ್ಲಾ, ರಾಜ್ಯ ಸಂಘಟನೆಯ ಸದಸ್ಯತ್ವ ಪಡೆದುಕೊಂಡು ಸಂಘಟನೆಯನ್ನು ಬಲಪಡಿಸಕೊಳ್ಳಬೇಕು. ಕನಿಷ್ಟ ಎರಡು ಎಕರೆ ಜಾಗ ಇಲ್ಲದ ಸಂಘಟನೆ ಎಂದರೆ ಅದು ವಿಪ್ರ ಸಂಘಟನೆ. ಸರ್ಕಾರಗಳಿಂದ ಏನೂ ಪಡೆದುಕೊಳ್ಳದ ಸಮಾಜ ಇದ್ರೆ ಅದು ಬ್ರಾಹ್ಮಣ ಸಮಾಜ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಏನಾದರೂ ಮಾಡಬೇಕು ಎಂದರೆ ಎಲ್ಲಾದರೂ ಸ್ವಲ್ಪ ಜಾಗ ಮಾಡಿಕೊಳ್ಳಬೇಕು. ಅವರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಸಮಾಜಕ್ಕೆ ಶಕ್ತಿ ಕೊಡುವ ಕೆಲಸವನ್ನು ವಿಪ್ರ ನೌಕರರ ಸಂಘ ಮಾಡುತ್ತಿದೆ ಎಂದರು.
ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಡಾ.ಧನಂಜಯ ಸರ್ಜಿ, ಎಕೆಬಿಎಂಎಸ್ ಜಿಲ್ಲಾ ಪ್ರತಿನಿಧಿ ಎನ್.ಎಂ. ರಘುರಾಮ್, ಜೋಯ್ಸ್ ರಾಮಾಚಾರ್, ಮ.ಸ.ನಂಜುಂಡಸ್ವಾಮಿ, ಆರ್.ಅಚ್ಯುತರಾವ್, ಬಿ.ಕೆ.ರವೀಂದ್ರನಾಥ್, ಡಾ.ಎಸ್.ಶ್ರೀಧರ್, ಜಿ.ಎಸ್.ಅನಂತ, ವೆಂಕಟೇಶಮೂರ್ತಿ, ಶಶಿರೇಖಾ ಕೆ.ಕೆ. ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post