ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಧಿಕೃತ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ರಾಜ್ಯಪಾಲ ಥಾವರ ಚಂದ್ ಗೆಲ್ಹೋಟ್ Governer Thawarchand Gehlot ಅವರು ಅಲ್ಪಾವಧಿ ಕಾಲ ನಗರದಲ್ಲಿ ತಂಗಿದ್ದು, ಈ ವೇಳೆ ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಕಾರವಾರದಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ರಾಜ್ಯಪಾಲರು ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್’ಗೆ ಇಂಧನ ತುಂಬಿಸಿಕೊಳ್ಳುವ ಸಲುವಾಗಿ ನಗರದ ಸರ್ಕಿಟ್ ಹೌಸ್ ಬಳಿಯಿರುವ ಹೆಲಿಪ್ಯಾಡ್’ನಲ್ಲಿ ಸುಮಾರು 1 ಗಂಟೆಗಳ ಕಾಲ ಇಳಿಸಲಾಗಿತ್ತು.
ಈ ವೇಳೆ ಶಾಸಕ ಈಶ್ವರಪ್ಪನವರು ತೆರಳಿ ರಾಜ್ಯಪಾಲರನ್ನು ಸ್ವಾಗತಿಸಿ, ಅಭಿನಂದಿಸಿ, ಕೆಲ ಕಾಲ ಅವರೊಂದಿಗೆ ಚರ್ಚೆ ನಡೆಸಿದರು.
Also read: ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆ ವಿಚಾರದಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?
ಹೆಲಿಪ್ಯಾಡ್’ನಿಂದ ವಿಶ್ರಾಂತಿ ನಿಲಯದವರೆಗೂ ರಾಜ್ಯಪಾಲರು ಹಾಗೂ ಈಶ್ವರಪ್ಪನವರು ಮಾತುಕತೆ ನಡೆಸುತ್ತಲೇ ನಡೆದುಬಂದಿದ್ದು ವಿಶೇಷವಾಗಿತ್ತು.
ಈ ಕುರಿತಂತೆ ಮಾತನಾಡಿದ ಈಶ್ವರಪ್ಪ, ರಾಜ್ಯಪಾಲರು ಕೆಲಕಾಲ ಶಿವಮೊಗ್ಗದಲ್ಲಿ ತಂಗುವ ವಿಚಾರ ತಿಳಿಯಿತು. ಹೀಗಾಗಿ, ಆಗಮಿಸಿ ಇಡಿಯ ಶಿವಮೊಗ್ಗ ಜನತೆಯ ಪರವಾಗಿ ಗೌರವಾನ್ವಿತ ರಾಜ್ಯಪಾಲರನ್ನು ಸ್ವಾಗತಿಸಿ, ಅಭಿನಂದಿಸಿದ್ದೇನೆ ಅಷ್ಟೇ ಎಂದರು.
ರಾಜ್ಯಪಾಲರ ಭೇಟಿಯ ವೇಳೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post