ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದ್ವಿಚಕ್ರ ವಾಹನಗಳ ಸೈಲೆನ್ಸರ್ ಪೈಪ್‌ಗಳನ್ನು ಹೆಚ್ಚಿನ ಶಬ್ಧ ಬರುವ ರೀತಿಯಲ್ಲಿ ಮಾರ್ಪಡಿಸಿದ್ದ 10 ಬೈಕ್‌ಗಳನ್ನು ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ:
ಹೋಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಕೆಲವು ಯುವಕರು ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್ ಪೈಪ್ ಗಳನ್ನು ಹೆಚ್ಚಿನ ಶಬ್ದ ಬರುವ ರೀತಿ ಮಾರ್ಪಡಿಸಿ, ಕರ್ಕಶ ಶಬ್ದ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ನಗರದಲ್ಲಿ ಸಂಚರಿಸುತ್ತಿದ್ದ ಹಿನ್ನೆಲೆ ಶಿವಮೊಗ್ಗ ನಗರ ಸಂಚಾರಿ ಠಾಣೆ ಪೊಲೀಸರು 10 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post