ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು, ಯಾವುದೇ ಕೆಲಸವನ್ನು ಒಳ್ಳೆಯ ಮನಸ್ಸಿನಿಂದ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಹೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ SP Lakshimi Prasad ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಏರ್ಪಡಿಸಿದ್ದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಹಾಗೆಯೇ ವೈಯಕ್ತಿಕ, ವೃತ್ತಿಪರ ಹಾಗೂ ಸಾಮಾಜಿಕ ಜೀವನವೆಂಬ ಮೂರು ಹಂತಗಳಿದ್ದು ಇವುಗಳಲ್ಲಿ ಒಂದರಲ್ಲಿ ಎಡವಿದರೂ ತಮ್ಮ ಗುರಿ ಮತ್ತು ಕನಸನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಆದರ್ಶ ವ್ಯಕ್ತಿಗಳನ್ನು ಹಾಗೂ ವೈಯಕ್ತಿಕ ಜೀವನಕ್ಕೆ ತಮ್ಮ ತಂದೆ ತಾಯಿಯನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ಪಿ ಮಾತನಾಡಿ, ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಕೇವಲ ಹೆಚ್ಚಿನ ಅಂಕ ಗಳಿಸುವುದರಿಂದ ಅವರ ಬದುಕು ರೂಪುಗೊಳ್ಳುವುದಿಲ್ಲ. ಅಂಕದೊಂದಿಗೆ ಭೌದ್ಧಿಕ ಸಾಮಥ್ರ್ಯ, ಭಾವನಾತ್ಮಕ ಕೌಶಲ್ಯ, ದೈಹಿಕ ಸಾಮಥ್ರ್ಯ ಹಾಗೂ ಸಾಮಾಜಿಕ ಮತ್ತು ನೈತಿಕ ಅಂಶಗಳಲ್ಲಿ ಶಿಕ್ಷಿತರಾಗಬೇಕೆಂದು ಹೇಳಿದರು.
Also read: ಎಸ್‌ಎಸ್‌ಎಲ್‌ಸಿ ರಿಸಲ್ಟ್‌ಗೆ ಕ್ಷಣಗಣನೆ: ಎಸ್‌ಎಮ್‌ಎಸ್ ಮೂಲಕ ಫಲಿತಾಂಶ ರವಾನೆ
ಕಾರ್ಯಾಗಾರದಲ್ಲಿ ಮೊಹಮ್ಮದ್ ಇಬ್ರಾಹಿಂ, ಬಶೀರ್ ಅಹ್ಮದ್, ಪತ್ರಕರ್ತರಾದ ಅಮೀನ್ ಮುದಾಸ್ಸಿರ್ ಮತ್ತು ಮುದಾಸ್ಸಿರ್ ಅಹ್ಮದ್ ಲಿಯಾಖತ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post