ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: 12ನೇ ವಾರ್ಡ್ ಬಾಪೂಜಿನಗರದ ಹರಿಜನ ಸೇವಾ ಸಮಿತಿಯ ಮಾರಿಕಾಂಬ ಸಮುದಾಯ ಭವನದಲ್ಲಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಗರ್ಭಿಣಿ ಶೀಘ್ರ ನೋಂದಣಿ ಕಾರ್ಯಕ್ರಮದಡಿಯಲ್ಲಿ ಸೀಮಂತ ಹಾಗೂ 2006ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದ ಭಾಗ್ಯಲಕ್ಷ್ಮೀ ಬಾಂಡ್ ವಿತರಣಾ ಯೋಜನೆಯಡಿಯಲ್ಲಿ 18 ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಪಮಹಾಪೌರರಾದ ಸುರೇಖ ಮುರಳೀಧರ್ ಮಾತನಾಡಿ, ಮಹಿಳೆ ತನ್ನ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು, ಆಕೆಯೇ ಕುಟುಂಬದ ಆಧಾರ. ಗಂಡ-ಹೆಂಡತಿ ಸಂಸಾರ ರಥದ ಎರಡು ಚಕ್ರವಿದ್ದಂತೆ. ಯಶಸ್ವೀ ಜೀವನ ಪ್ರಯಾಣಕ್ಕೆ ಇಬ್ಬರೂ ಪ್ರಮುಖರು ಎಂದು ಹೇಳಿದರು.
ಇಲಾಖಾ ಮೇಲ್ವಿಚಾರಕರಾದ ರೇಖಾ, ಅಂಗನವಾಡಿ ಕಾರ್ಯಕರ್ತರಾದ ನೇತ್ರ, ಇಂದಿರಾ, ಲೀಲಾವತಿ, ರಂಗಮ್ಮ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















