ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋವಿಡ್ ಲಸಿಕೆಯಿಂದ #Covid Vaccination ಹೃದಯಾಘಾತಗಳು ಆಗುತ್ತಿದೆ ಎಂಬುದು ವಿವಾದವಲ್ಲದ ವಿವಾದ ಎಂದು ಸಂಸದ, ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ #Cardiologist Dr. C N Manjunath ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 25 ವರ್ಷಗಳ ವೈದ್ಯಕೀಯ ಅನುಭವದಲ್ಲಿ ಅಂದಿನಿAದಲೂ ಯುವಕರಲ್ಲಿ ಹೃದಯಾಘಾತ #Heart Attack ಪ್ರಕರಣಗಳು ಹೆಚ್ಚುತ್ತಲೆ ಇದೆ ಎಂದರು.
ಪ್ರತಿ ವರ್ಷ 30 ಲಕ್ಷ ಜನ ಭಾರತದಲ್ಲಿ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲಿ 45 ವರ್ಷ ವಯೋಮಾನದ ಒಳಗಿನವರೆ ಜಾಸ್ತಿ. ಹಾಗಾಗಿ ಇದು ಹೊಸ ಬೆಳವಣಿಗೆಯಲ್ಲ. ಜನರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post