ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ತುಂಬಾ ಶ್ಲಾಘನೀಯ ಕೆಲಸ ಎಂದು ಪತ್ರಕರ್ತ ಸೋಮನಾಥ್ ತಿಳಿಸಿದರು.
ಅಖಿಲ ಭಾರತ ಕ್ರೈಸ್ತ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕ ನಗರದ ಬಸವನ ಗುಡಿಯಲ್ಲಿ ಹಮ್ಮಿಕೊಂಡಿದ್ದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ರೈಸ್ತ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕ ದವರು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ಗಳನ್ನು ಹಂಚುವುದರ ಮೂಲಕ ನೆರವಾಗುತ್ತಿದ್ದಾರೆ. ಸಮಾಜಕ್ಕಾಗಿ ದುಡಿಯುವುದು ತುಂಬಾ ಅಭಿನಂದನೆಯ ಕೆಲಸ ಎಂದು ಹೇಳಿದರು.
ಕೊರೋನ 2ನೆ ಅಲೆಯಿಂದ ಬಹಳಷ್ಟು ಮಂದಿ ದುಡಿಮೆ ಇಲ್ಲದೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ನೊಂದವರಿಗೆ ಸ್ಪಂದಿಸುವ ವ್ಯಕ್ತಿಗಳನ್ನು ನೋಡಿ ತುಂಬಾ ಹೆಮ್ಮೆ ಆಯಿತು ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ವಿನ್ಸೆಂಟ್ ರೋಡ್ರಿಗಸ್ ಮಾತನಾಡಿ, ಆರಂಭದಲ್ಲಿ 50 ಜನರಿಗೆ ದಿನಸಿ ಕಿಟ್ ಗಳನ್ನು ಹಂಚುವ ಯೋಚನೆ ಇತ್ತು. ಶಿವಮೊಗ್ಗದ ಹಲವು ದಾನಿಗಳು ನೆರವು ನೀಡಿ ಬೆಂಬಲ ಸೂಚಿಸಿದರು .ಹೀಗೆ ಹಲವು ದಾನಿಗಳು ನೆರವು ನೀಡಿದ್ದರಿಂದ ನಾವು 650 ಜನರಿಗೆ ದಿನಸಿ ಕಿಟ್ ಹಂಚಲು ಸಾಧ್ಯವಾಯಿತು ಎಂದು ದಾನಿಗಳ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಜಯಶೀಲನ್- ತಾರ ದಂಪತಿ ಭಾಗವಹಿಸಿದ್ದರು. ಮಹಾಸಭಾ ಘಟಕದ ಪದಾಧಿಕಾರಿಗಳಾದ ಕಿರಣ್ ಫೆರ್ನಾಂಡಿಸ್, ಅರ್ನೆಸ್ಟ್ ಪ್ಯಾಟ್ರಿಕ್, ಸುಸೈ ನಾದನ್ ಉಪಸ್ಥಿತರಿದ್ದರು ಪ್ರಧಾನ ಕಾರ್ಯದರ್ಶಿ ಜೋಸೆಫ್ ಟೆಲ್ಲಿಸ್ ನಿರೂಪಿಸಿ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post