ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಡುಪಿಯಿಂದ ಆರಂಭಗೊಂಡು ರಾಜ್ಯದಾದ್ಯಂತ ವ್ಯಾಪಿಸುತ್ತಿರುವ ಹಿಜಾಬ್-ಕೇಸರಿ ಶಾಲು ವಿವಾದ ಶಿವಮೊಗ್ಗಕ್ಕೂ ಕಾಲಿಟ್ಟಿದ್ದು, ನಗರದ ಪ್ರತಿಷ್ಟಿತ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿನ ಮುಂಭಾಗ ಬೃಹತ್ ಧರಣಿ ನಡೆಸಿದ್ದು, ಹಿಜಾಬ್ ಧರಿಸಿ ಬಂದವರನ್ನು ಕಾಲೇಜಿನಿಂದ ಹೊರಕ್ಕೆ ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕಾಮಿಸಿದ ಪ್ರಾಂಶುಪಾಲೆ ವೀಣಾ ನಮ್ಮ ಕಾಲೇಜಿನಲ್ಲಿ ೨೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸದ್ಯ ಯಾವುದೇ ನಿಗಧಿತ ಸಮವಸ್ತ್ರ ನಿರ್ಧರಿಸಿಲ್ಲ. ಆದರೆ, ಹಿಜಾಬ್ ಧರಿಸಿದವರಿಗೆ ಒಂದು ಕೊಠಡಿಯನ್ನು ಸೂಚಿಸಲಾಗಿತ್ತು. ಹಾಗೂ ಅದನ್ನು ತೆಗೆದಿಟ್ಟು ತರಗತಿಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇದಕ್ಕೆ ಒಪ್ಪದೆ ಇರುವವರನ್ನು ತರಗತಿಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ವಿವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನು ನಿಯಂತ್ರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	





 Loading ...
 Loading ... 
							



 
                
Discussion about this post