ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸನಗರ: ತಾಲೂಕಿನ ಯಡೂರು ಗ್ರಾಮ ಪಂಚಾಯ್ತಿಯ ಕವರಿ ಗ್ರಾಮದ ಬಿಚ್ಚಾಡಿಯಿಂದ ಮಾಗಲು ಹೋಗುವ ದಾರಿಯಲ್ಲಿ ಭಾರೀ ಮಳೆಗೆ ಬೃಹತ್ ಗುಡ್ಡ ಕುಸಿದಿದ್ದು, ಸ್ವಲ್ಪದರಲ್ಲಿ ಭಾರೀ ಅನಾಹುತ ತಪ್ಪಿದೆ.
ಇಂದು ಮಧ್ಯಾಹ್ನ ಗುಡ್ಡ ಕುಸಿದಿದ್ದು, ಈ ವೇಳೆಯಲ್ಲಿ ವಾಹನ ಸಂಚಾರವಿತ್ತು ಎಂದು ಹೇಳಲಾಗಿದೆ. ಆದರೆ, ಅದೃಷ್ಟವಷಾತ್ ಯಾರಿಗೂ ಯಾವುದೇ ರೀತಿಯಲ್ಲೂ ಸಹ ಹಾನಿಯಾಗಿಲ್ಲ.
ಈ ಕುರಿತಂತೆ ಮಾತನಾಡಿದ ಸ್ಥಳೀಯರು, ಪ್ರತಿ ಮಳೆಗಾಲದಲ್ಲೂ ಸಹ ಇಂತಹ ಸಣ್ಣಪುಟ್ಟ ಘಟನೆಗಳು ಈ ಭಾಗದಲ್ಲಿ ಸಂಭವಿಸುತ್ತಲೇ ಇರುತ್ತದೆ.
ಮಳೆಗಾಲದಲ್ಲಿ ಈ ಭಾಗದ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ ಇದಕ್ಕೆ ನೇರ ಹೊಣೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
(ಮಾಹಿತಿ: ಮಂಜುನಾಥ್ ಮಾಗಲು)
Get In Touch With Us info@kalpa.news Whatsapp: 9481252093
Discussion about this post