ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯ ಬಗ್ಗೆ ನಡೆಯುವ ಸಭೆಗಳನ್ನು ಮುಕ್ತವಾಗಿ ನಡೆಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವುದರ ಬಗ್ಗೆ ಆದೇಶ ಹೊರಡಿಸಿದೆ. ಈ ನೀತಿಯನ್ನು ನಿರೂಪಿಸುವುದರ ಮುನ್ನ ಜನ ಸಾಮಾನ್ಯರ ನಡುವೆ ಸಮಲೋಚನಾ ಪ್ರಕಿಯೆಯನ್ನು ನಡೆಸಬೇಕು ಮತ್ತು ರೈತ ಪ್ರತಿನಿಧಿಗಳನ್ನು ಸಂಪರ್ಕಿಸಿ ತೊಡಗಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ನಿರ್ಧಿಷ್ಠವಾಗಿ ಉಲ್ಲೇಖಿಸಿರುವುದನ್ನು ಪ್ರತಿಭಟನಾಕಾರರು ಸ್ವಾಗತಿಸಿದ್ದಾರೆ.
ದೇಶದಲ್ಲಿನ ರೈತರುಗಳ ಕೃಷಿ ಉತ್ಪಾದನಾ ಪರಿಸ್ಥಿತಿ ಮತ್ತು ಅವರ ಸಾಮಾಜಿಕ, ಆರ್ಥಿಕ ಸನ್ನಿವೇಶಗಳು ಅತ್ಯಂತ ವೈವಿದ್ಯಮಯವಾಗಿರುವಂತಹದು. ರೈತರಿಗಾಗಿ ರಾಷ್ಟ್ರೀಯ ನೀತಿಯಲ್ಲಿ ವ್ಯಾಖ್ಯಾನಿಸಲಾಗಿರುವಂತೆ ರೈತರೆಂದರೆ ಕೃಷಿ ಕಾರ್ಮಿಕರು, ಹಿಡುವಳಿದಾರರು, ಜೇನು ಸಾಕಾಣಿಕೆದಾರರು ಸೇರಿದಂತೆ ವಿವಿಧ ರೀತಿಯ ರೈತ ವರ್ಗಗಳನ್ನು ಒಳಗೊಂಡಿರುತ್ತದೆ. ಸಂಪ್ರಾದಾಯಕವಾಗಿ ಆಹಾರ ಬೀಜ ವೈವಿದ್ಯತೆಯ ಸಂರಕ್ಷಣೆ ಮಾಡುತ್ತಿರುವ ರೈತರುಗಳು ಇರುವಂತೆಯೇ ಸಾವಯವ ಅಥವಾ ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತರ ಸಮಾಲೋಚನೆಗಳು ಈ ಎಲ್ಲಾ ವರ್ಗದ ರೈತರು ಮತ್ತು ದೇಶದ ಎಲ್ಲಾ ರಾಜ್ಯಗಳ ರೈತರ ಅಭಿಪ್ರಾಯಗಳನ್ನು ಒಳಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದ ರೈತರು ಕೃಷಿಯಲ್ಲಿ ಹೆಚ್ಚಾಗುತ್ತಿರುವ ಕಾಪೆರ್Çೀರೇಟ್ ನಿಯಂತ್ರಣ ಮತ್ತು ಏಕಾದಿಪತ್ಯಗಳ ಬಗ್ಗೆ ಬಹಳ ಯಶಸ್ವಿಯಾಗಿ ಎಚ್ಚರಿಕೆಯಿಂದಿದ್ದಾರೆ. ಈಗಾಗಲೇ ಐತಿಹಾಸಿಕ ರೈತ ಅಂದೋಲನವು ರೈತರು ಅಂತಹ ಮಾದರಿಗಳನ್ನು ತಿರಸ್ಕರಿಸುತ್ತಾರೆ ಎಂಬುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಜೈವಿಕ ತಂತ್ರಜ್ಞಾನವನ್ನು ರೈತರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ ಎಂದು ದೂರಿದರು.
ಕುಲಾಂತರಿ ಬೆಳೆಗಳಿಂದ ಕೃಷಿ ಉತ್ಪಾದಕರು ಮತ್ತು ಗ್ರಾಹಕರಾಗಿ ಹಾನಿಗೊಳಗಾಗುವ ದೇಶದ ರೈತರ ಧ್ವನಿಯನ್ನು ಆಲಿಸುತ್ತೀರಿ ಎಂದು ನಿರೀಕ್ಷೆ ಮಾಡಲಾಗಿತ್ತು. ಕೇವಲ ರೈತರ ಅಭಿಪ್ರಾಯಗಳು ಮತ್ತು ಅನುಭವಗಳನ್ನು ಬರಿ ಕೇಳಿಸಿಕೊಳ್ಳುವುದು ಮಾತ್ರವಲ್ಲ. ಸುಪ್ರೀಂಕೋರ್ಟ್‍ನ ಆದೇಶದಂತೆ ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯ ಬಗ್ಗೆ ನಡೆಯುವ ಸಭೆಗಳನ್ನು ಮುಕ್ತವಾಗಿ ನಡೆಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಹ ಇಂದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ.ಗಂಗಾಧರ್, ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಹೆಚ್.ಎಸ್.ಮಂಜುನಾಥೇಶ್ವರ್, ಜಗದೀಶ್ ನಾಯ್ಕ್, ಹಾಲೇಶಪ್ಪ ಗೌಡ್ರು, ಈರಣ್ಣ ಪ್ಯಾಟಿ ಇನ್ನಿತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post