ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾರಾವ್ ಜತೆಗಿನ ಸಂಪರ್ಕದ ವಿಚಾರದಲ್ಲಿ ಗೃಹಮಂತ್ರಿ ಡಾ.ಜಿ. ಪರಮೇಶ್ವರ್ #Home Minister Parameshwar ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ #DCM DK Shivakumar ಹೇಳಿಕೆಗಳು ಗೊಂದಲದ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಈ ಇಬ್ಬರು ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ವಾಸ್ತವ ಏನು ಎನ್ನುವುದನ್ನು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಒತ್ತಾಯಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ನಡೆಗಳು ಒಂದು ರೀತಿ ಗೃಹ ಇಲಾಖೆಯನ್ನೇ ತಪ್ಪಿತಸ್ಥ ಸ್ಥಾನದಲ್ಲಿಡುವಂತೆ ಮಾಡಿದೆ. ಇದು ನನಗೆ ತುಂಬಾ ನೋವು ತಂದಿದೆ. ಡಾ.ಜಿ. ಪರಮೇಶ್ವರ್ ಅವರು ಸಜ್ಜನರು. ಅವರ ಮೇಲೆ ಅಪಾದನೆ ಮಾಡುವುದಿಲ್ಲ, ಆದರೆ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿತಳಾಗಿರುವ ಆ ನಟಿಗೆ ಪರಮೇಶ್ವರ್ ಅವರು ಸುಮಾರು 40 ಲಕ್ಷ ಊಡುಗೊರೆ ಕೊಟ್ಟಿರಬಹುದು ಎಂದಿದ್ದಾರೆ. ಇದಕ್ಕೆ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ಅವರನ್ನೇ ಕೇಳಿ ಎಂದಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆಗಳು ಗೊಂದಲ ಜತೆಗೆ ಅನುಮಾನ ಹುಟ್ಟಿಸುತ್ತವೆ ಎಂದರು.

ಇದೇ ವೇಳೆ, ರಾಜ್ಯದಲ್ಲಿನ ಸುಮಾರು ೧೮೦ ಜನೌಷಧಿ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳು ಸಿಗಲಿ ಎನ್ನುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಈ ಜನೌಷಧಿ ಕೇಂದ್ರ ಗಳನ್ನು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಇವುಗಳನ್ನು ಮುಚ್ಚುವ ಕ್ರಮ ಸರಿಯಾದದ್ದು ಅಲ್ಲ, ಹಾಗೇನಾದರೂ ಮಾಡಿದರೆ ಜನಾಂದೋಲನ ನಡೆಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post