ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ಣಾಟಕ ಬ್ಯಾಂಕ್ ಗ್ರಾಹಕರ ವಿಶ್ವಾಸ ಗಳಿಸುವುದರ ಜತೆಗೆ ಪ್ರತಿ ಹಂತದಲ್ಲು ಪ್ರಗತಿ ಕಾಣುತ್ತಾ ಸಾಗುತ್ತಿದೆ ಎಂದು ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂಧಕ ಹಯವದನ ಉಪಾಧ್ಯಾಯ ಹೇಳಿದರು.
ಕರ್ಣಾಟಕ ಬ್ಯಾಂಕ್ ವಿನೋಬನಗರ ಶಾಖೆಯು ಸುಮುಖ ವಾಣಿಜ್ಯ ಸಂಕೀರ್ಣದ ನೆಲ ಮಹಡಿಗೆ ಸ್ಥಳಾಂತರಗೊಂಡಿದ್ದು, ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಜೂನ್ 2021ರ 3 ತಿಂಗಳ ನಿವ್ವಳ ಲಾಭ 106.08 ರು. ಕೋಟಿ ಆಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ವ್ಯವಹಾರ 1,31,332 ಕೋಟಿ ರು. ದಾಟಿದೆ. ಹಾಗೆಯೇ ಬ್ಯಾಂಕ್ ಇದುವರೆಗೆ ದೇಶಾದ್ಯಂತ 858 ಶಾಖೆ ಹಾಗೂ 1459 ಎಟಿಎಂ/ಕ್ಯಾಪ್ ರಿಸೈಕ್ಲರ್ ಹೊಂದಿದ್ದು, 1,20,000ಕ್ಕೂ ಅಕ ಶೇರುದಾರರು, 1.13 ಕೋಟಿಗೂ ಅಕ ಗ್ರಾಹಕರು ಹಾಗೂ 8313 ನಿಷ್ಟಾವಂತ ಸಿಬ್ಬಂದಿಗಳನ್ನು ಹೊಂದಿದೆ ಎಂದರು.
ಗ್ರಾಹಕರಿಗಾಗಿ ಹಬ್ಬಗಳ ಮಾಸವಾದ ಆಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಗೃಹ ಸಾಲ ಹಾಗೂ ವಾಹನ ಸಾಲಗಳಿಗಾಗಿ ಸಾಕಷ್ಟು ರಿಯಾಯಿತಿ ನೀಡುವಂತಹ ವಿಶೇಷ ಉತ್ಸವವನ್ನು ಆಯೋಜಿಸಲಾಗಿದೆ. ಅದು ಅಕ್ಟೋಬರ್ 7 ರಿಂದ ಡಿಸೆಂಬರ್ 31ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾರು ಅಥವಾ ಮನೆ ಸಾಲ ಪಡೆಯುವವರಿಗೆ 0.25% ಬಡ್ಡಿ ಕಡಿಮೆ ಇರುತ್ತದೆ. ಕಾರು ಸಾಲದ ನಿರ್ವಹಣಾ ವೆಚ್ಚ ಶೇ.50ಕ್ಕೂ ಕಡಿಮೆ ಇರುತ್ತದೆ ಹಾಗೂ ಗೃಹ ಸಾಲಕ್ಕೆ ಶೂನ್ಯ ನಿರ್ವಹಣಾ ವೆಚ್ಚ ಇರುತ್ತದೆ. ಬ್ಯಾಂಕಿನ ಎಲ್ಲಾ ಗ್ರಾಹಕ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಮೂಹದ ಟಿ. ಸುಬ್ಬರಾಮಯ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೆಡಿಕಲ್ ಡೈರೆಕ್ಟರ್ ಡಾ. ನಾಗೇಂದ್ರ, ಪ್ರಾದೇಶಿಕ ಕಚೇರಿಯ ಅಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post