ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನರು ದೇವರಂತೆ ಕಾಣುವ ವೈದ್ಯರಲ್ಲಿ ಸೇವೆಯೊಂದಿಗೆ ವೃತ್ತಿ ಪ್ರಾಮಾಣಿಕತೆಯೂ ಸಹ ಅತ್ಯಂತ ಮುಖ್ಯವಾದುದು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ #Subbaiah Medial College ಡೀನ್ ಡಾ.ನಂದಕಿಶೋರ ಲಾಹೋಟಿ ಅವರು ಯುವ ವೈದ್ಯರಿಗೆ ಕಿವಿಮಾತು ಹೇಳಿದರು.
ವೈದ್ಯರ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಸ್ತಗಳನ್ನು ಗುಣಪಡಿಸುವುದು, ಹೃದಯವನ್ನು ಕಾಳಜಿ ವಹಿಸುವುದು ಎನ್ನುವುದು ಈ ವರ್ಷದ ಥೀಮ್ ಆಗಿದ್ದು, ಇದಕ್ಕೆ ತಕ್ಕಂತೆ ಇಂದಿನ ವೈದ್ಯರು ಸೇವೆ ಸಲ್ಲಿಸಬೇಕು. ಇದಕ್ಕೆ ಪೂರಕವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಚರಕ ಸಂಹಿತೆಯೇ ಮೂಲಭೂತ ಪಠ್ಯವಾಗಿದ್ದು, ಇದರ ಮಹತ್ವವನ್ನು ಅರಿಯಬೇಕು ಎಂದರು.

Also read: ಕ್ಷಣ ಮಾತ್ರದಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ನೀರಿನಲ್ಲಿ ಕೊಚ್ಚಿಹೋದ ತಾಯಿ | ವೀಡಿಯೋ ನೋಡಿ
ಇಂದಿನ ಪರಿಸ್ಥಿತಿಯಲ್ಲಿ ವೈದ್ಯರಿಗೆ ಹಲವಾರು ರೀತಿಯ ಸವಾಲುಗಳು ಎದುರಾಗುತ್ತಿವೆ. ಯಾವಾಗ ಯಾವ ಸಂದರ್ಭ ಎದುರಾಗುತ್ತದೆಯೋ ಎನ್ನುವುದು ತಿಳಿಯುವುದಿಲ್ಲ. ಇದಕ್ಕಾಗಿ ಜಾಗ್ರತೆ ವಹಿಸಿಕೊಳ್ಳಬೇಕಾದ ಅಗತ್ಯವಿದ್ದು, ವೈದ್ಯರು ತಮ್ಮ ಭದ್ರತೆಗಾಗಿ ವೃತ್ತಿ ಜೀವನದ ಪ್ರತಿ ದಾಖಲೆಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಕಾಲೇಜಿನ ಹಿರಿಯ ವೈದ್ಯ ಡಾ.ಶೇಖರಪ್ಪ ಅವರನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ನಿರಂತರ ಸೇವೆಗಾಗಿ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post