ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಾಸ್ಕ್ ಧರಿಸದವರ ವಿರುದ್ಧ 2021ನೇ ಸಾಲಿನ ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 1694 ಪ್ರಕರಣಗಳನ್ನು ದಾಖಲಿಸಿ 2,23,350 ರೂ. (ಎರಡು ಲಕ್ಷದ ಇಪ್ಪತ್ತ ಮೂರು ಸಾವಿರದ ಮೂರುನೂರ ಐವತ್ತು) ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 468 ಪ್ರಕರಣಗಳನ್ನು ದಾಖಲಿಸಿ 1,00,750ರೂ. (ಒಂದು ಲಕ್ಷದ ಏಳು ನೂರ ಐವತ್ತು) ದಂಡ ವಿಧಿಸಲಾಗಿದ್ದು, ತಾಲೂಕುವಾರು ವಿವರ ಹೀಗಿದೆ.
ಭದ್ರಾವತಿ: ಒಟ್ಟು 827 ಪ್ರಕರಣ, 82,700ರೂ. ದಂಡ.
ಸಾಗರ: ಒಟ್ಟು 83 ಪ್ರಕರಣ, 8,300ರೂ. ದಂಡ.
ಶಿಕಾರಿಪುರ: ಒಟ್ಟು 160 ಪ್ರಕರಣ 16,000ರೂ.
ಸೊರಬ: ಒಟ್ಟು 67 ಪ್ರಕರಣ 6,700ರೂ. ದಂಡ.
ತೀರ್ಥಹಳ್ಳಿ: ಒಟ್ಟು 44 ಪ್ರಕರಣ 4,400ರೂ. ದಂಡ.
ಹೊಸನಗರ: ಒಟ್ಟು 45 ಪ್ರಕರಣ, 4,500ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post