ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಲಬುರ್ಗಿಯಲ್ಲಿ ಮೊನ್ನೆ ನಡೆದ 30ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಶಿವಮೊಗ್ಗದ ಬಾಲ ವಿಜ್ಞಾನಿಗಳಾದ ಹ್ರಿಧಾನ್ ಆರ್. ಜೈನ್ ಮತ್ತು ಸಂಚಿತ್ ಎಸ್. ಭೂಪಾಳಂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಅವರು ಅಡಿಕೆ ಸಿಪ್ಪೆ ತ್ಯಾಜ್ಯ ಬಳಿಸಿ ಅರೇಕ ಪೀಟ್ ತಯಾರಿಸಿದ್ದಾರೆ. ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಈ ಪೀಟ್ ಗಳು ನೀರನ್ನು ಹಿಡಿದು ಬಹುಕಾಲದವರೆಗೆ ಗಿಡಗಳಿಗೆ ನೀರನ್ನು ಪೂರೈಸುತ್ತವೆ. ಈ ಮೊದಲು ರಸ್ತೆ ಬದಿಗಳಲ್ಲಿ ಅಡಿಕೆ ಸಿಪ್ಪೆಗಳನ್ನು ಎಸೆದು, ಸುಟ್ಟು ಪರಿಸರ ಹಾನಿ ಮಾಡಲಾಗುತಿತ್ತು. ಈ ಆವಿಷ್ಕಾರದಿಂದ ಇನ್ನು ಮುಂದೆ ಇವುಗಳನ್ನು ಪೀಟ್ ಗಳನ್ನಾಗಿ ಸಂಸ್ಕರಿಸಿದರೆ ರೈತರಿಗೆ ಭಾರಿ ಅನಕೂಲವಾಗಲಿದೆ.
Also read: ಬಾಲ ಕಾರ್ಮಿಕರ ತಪಾಸಣೆ ನಡೆಸಿದ ಕಾರ್ಮಿಕ ಇಲಾಖೆ ಮಾಲೀಕರಿಗೆ ನೀಡಿದ ಸೂಚನೆಗಳೇನು?
ಈ ಆವಿಷ್ಕಾರಕ್ಕಾಗಿ ಈ ಮಕ್ಕಳು ರಾಷ್ಟ್ರ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.
ಇದೇ ತಿಂಗಳು 27 ರಿಂದ 31 ರವರೆಗೆ ಗುಜರಾತ್ ನ ಅಹಮದಾಬಾದ್ ನಲ್ಲಿ ರಾಷ್ಟ್ರಮಟ್ಟದ ಸಮಾವೇಶ ನಡೆಯುಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post