ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿ.ಎಸ್. ಯಡಿಯೂರಪ್ಪನವರು #B S Yadiyurappa ನೀಚರು. ಆರಗ ಜ್ಞಾನೇಂದ್ರ #Araga Gnanendra ಒಬ್ಬ ಹುಚ್ಚ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಬಿಜೆಪಿ ನಾಯಕರುಗಳ ವಿರುದ್ಧ ಹರಿಹಾಯ್ದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪನವರು ಎಷ್ಟು ನೀಚರಿದ್ದಾರೆ ಎಂದರೆ, ಅದು ಯಾರಿಗೂ ಗೊತ್ತಾಗುವುದಿಲ್ಲ. ಅವರ ಬಗ್ಗೆ ಹೇಳುತ್ತಾ ಹೋದರೆ ಈ ಪತ್ರಿಕಾಗೋಷ್ಠಿ ಸಾಕಾಗುವುದಿಲ್ಲ. ನಾನು ಹೇಳಿದರೆ ಅವರ ಅಸಲಿ ಚಿತ್ರಗಳು ಹೊರ ಬರುತ್ತವೆ. ಅವರಿಗೆ ಶೋಭ ಅವರ ಮೇಲೆ ಯಾಕಿಷ್ಟು ಮೋಹವೂ ಗೊತ್ತಿಲ್ಲ. ಮಹಿಳೆಯರೆಂದರೆ ಕೇವಲ ಶೋಭ ಮತ್ತು ಭಾರತಿ ಶೆಟ್ಟಿಯವರು ಮಾತ್ರವೇ ಎಂದು ಪ್ರಶ್ನೆ ಮಾಡಿದರು.
ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೂ ಬರುತ್ತಾರೋ ಗೊತ್ತಿಲ್ಲ. ನೆನ್ನೆ ಅವರು ಪತ್ರಕರ್ತರೊಡನೆ ಮಾತು ಆಡಲಿಲ್ಲ. ಮಹಿಳೆಯರ ಶಾಪ ಅವರಿಗೆ ತಟ್ಟುತ್ತದೆ. ಅವರ ಮಕ್ಕಳು ದಾರಿ ತಪ್ಪಿದ್ದಾರೆ. ತಮಗೆ ಬೇಕಾದ ಹೆಣ್ಣು ಮಕ್ಕಳಿಗೆ ಮಾತ್ರ ಅಧಿಕಾರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Also read: ಲೋಕಸಭಾ ಚುನಾವಣೆ 2024: ಹಲವು ಗಣ್ಯರಿಂದ ಮತದಾನ
22ರಿಂದ ಚುನಾವಣೆಯ ಕುಸ್ತಿ ಅಖಡಾ ರೆಡಿಯಾಗುತ್ತದೆ. ನಮ್ಮ ಫೈಲ್ವಾನರು ಕೂಡ ಕುಸ್ತಿ ಆಡಲು ರೆಡಿಯಾಗಿದ್ದಾರೆ. ಅದರಲ್ಲಿ ಧರ್ಮ ಗೆಲ್ಲುತ್ತೋ, ಅಧರ್ಮ ಗೆಲ್ಲುತ್ತೋ, ಹಣ ಗೆಲ್ಲತ್ತೋ, ಸಿದ್ಧಾಂತ ಗೆಲ್ಲತ್ತೋ, ವೈಚಾರಿಕ ನಿಲುವುಗಳು ಗೆಲ್ಲತ್ತದೆಯೋ, ಕುಟುಂಬ ರಾಜಕಾರಣ ಗೆಲ್ಲುತ್ತದೆಯೋ ನೋಡಿ ಬಿಡೋಣ, ನಾನು ಅಖಾಡಕ್ಕೆ ರೆಡಿಯಾಗಿ ಶೆಡ್ಡ್ ಹೊಡೆದು ನಿಂತಿದ್ದೇನೆ. ಚಿಹ್ನೆ ಬಂದ ಮೇಲೆ ಮತ್ತಷ್ಟು ಪ್ರಚಾರ ಹೆಚ್ಚಾಗಲಿದೆ ಇಡೀ ಹಿಂದೂ ಭಕ್ತರೇ ನನ್ನೊಂದಿಗಿದ್ದಾರೆ. ನನ್ನ ಗೆಲುವು ಶತಸಿದ್ಧ ಎಂದರು.
ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳ ಹತ್ಯೆಯಾಗಿದೆ. ಹಿಂದೂಗಳ ಮೇಲೆ ಹತ್ಯೆ ಇನ್ನು ನಿಂತಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಗೃಹಮಂತ್ರಿ ಮತ್ತು ಮುಖ್ಯಮಂತ್ರಿಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಮುಸ್ಲಾಂನ ಗುಂಡಾಗಳು ಮತ್ತೆ ಬಾಲ ಬಿಚ್ಚ ತೊಡಗಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು.
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ನೆನ್ನೆ ಬಿ.ವೈ.ರಾಘವೇಂದ್ರ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೂರುವರೆ ಮುಖ್ಯಮಂತ್ರಿಗಳು ಹಾಜರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಗೃಹಮಂತ್ರಿಯಾಗಿದ್ದ ಅರಗಜ್ಞಾನೇಂದ್ರ. ಈ ಅರಗಜ್ಞಾನೇಂದ್ರ ಅರ್ಧ ಮುಖ್ಯಮಂತ್ರಿ ಹಾಗಾಗಿ ಮೂರುವರೆ ಮುಖ್ಯಮಂತ್ರಿಗಳು ಬಂದಿದ್ದರು ಅದನ್ನೇ ದೊಡ್ಡ ಶೋ ಎಂದು ಬಿಂಬಿಸಿದ್ದಾರೆ. ನನ್ನಜೊತೆಗೆ 35 ಸಾವಿರ ಜನ ಶಕ್ತಿ ಹಿಂದು ಶಕ್ತಿಯ ಬೆಂಬಲವಿತ್ತು ಎಂದು ತಿಳಿಸಿದರು.
ಇನ್ನೂ ಆರಗಜ್ಞಾನೇಂದ್ರರ ವಿರುದ್ಧವು ಹರಿಹಾಯ್ದ ಅವರು, ಅವರಿಗೆ ಜ್ಞಾನವೇ ಇಲ್ಲ. ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ತೀರ್ಥಹಳ್ಳಿಯಲ್ಲಿ ಭಜರಂಗ ದಳದ ಕಾರ್ಯಕರ್ತರು ಸೇರಿದಂತೆ ಅವರಿಗೆ ಬೆಂಬಲ ನೀಡಿದ ಬಿಜೆಪಿಗರು ಈಗ ನನಗೆ ಬೆಂಬಲ ನೀಡುವುದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ನನಗೆ ಬೆಂಬಲ ನೀಡಿದವರ ಮನೆಗಳಿಗೆ ಹೋಗಿ ನೀವು ಈಶ್ವರಪ್ಪನವರ ಜೊತೆ ಹೋಗಕೂಡದು ಎಂದು ಹೇಳುತ್ತಾರೆ. ನನ್ನ ಸೋಲನ್ನು ಕಣ್ಣಿನಿಂದ ನೋಡಲು ಆಗುವುದಿಲ್ಲ ಎಂದು ಅವರು ಹೇಳುತ್ತಾರೆ. ನೋಡುವುದು ಬೇಡ ನಾನು ಗೆದ್ದೆ ಗೆಲ್ಲುತ್ತೇನೆ, ಅವರು ಕೂಪಮಂಡೂಕ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ತೀರ್ಥಹಳ್ಳಿಯಲ್ಲಿ ನನಗೆ ಬೆಂಬಲ ಕೊಡುವವರೇ ಹೆಚ್ಚಿದ್ದಾರೆ ಎಂದರು.
ಅರಗಜ್ಞಾನೇಂದ್ರ ಗೃಹಮಂತ್ರಿಯಾಗಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಕೇಸ್‍ಗಳನ್ನು ಹಾಗೂ ಗೋ ರಕ್ಷಕರ ಮೇಲಿದ್ದ ಕೇಸ್‍ಗಳನ್ನು ಏಕೆ ವಾಪಾಸ್ಸು ಪಡೆಯಲಿಲ್ಲ. ಇವರು ಹಿಂದೂ ಪರವೇ ಎಂದು ಪ್ರಶ್ನೆ ಮಾಡಿದರು. ತೀರ್ಥಹಳ್ಳಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರಗಜ್ಞಾನೇಂದ್ರ ನಿಂತರೆ ಅವರನ್ನು ಗೆಲ್ಲಿಸಲು ನಾನೇ ಪ್ರಚಾರ ಮಾಡಬೇಕಾಗುತ್ತದೆ. ಮಾಡುತ್ತೇನೆ ಕೂಡ ನಾನು ಇನ್ನೂ ಬಿಜೆಪಿಯನ್ನು ಬಿಟ್ಟಿಲ್ಲ ನಾನು ಗೆದ್ದು ಮತ್ತೆ ಬಿಜೆಪಿಯನ್ನೇ ಸೇರುತ್ತೇನೆ ಎಂದು ಪುನರುಚ್ಛರಿಸಿದರು.
ಕಾಂಗ್ರೆಸ್ಸ್, ಜೆಡಿಎಸ್ ಪಕ್ಷದ ಅನೇಕರು ಈಗಾಗಲೇ ನನಗೆ ಬೆಂಬಲ ನೀಡಿದ್ದಾರೆ. ಬಿಜೆಪಿಯ ಶೇ. 60ರಷ್ಟು ಕಾರ್ಯಕರ್ತರು ನನೊಂದಿಗಿದ್ದಾರೆ. ಶಿಕಾರಿಪುರದಲ್ಲಿಯೇ ನನಗೆ ಅತಿ ಹೆಚ್ಚು ಬೆಂಬಲ ಸಿಗಲಿದೆ. ಅಲ್ಲಿ ಹಲವು ಸಭೆಗಳನ್ನು ನಾನು ಮಾಡುತ್ತೇನೆ. ತೀರ್ಥಹಳ್ಳಿ, ಭದ್ರಾವತಿ ಸೇರಿದಂತೆ ಎಲ್ಲಾ ಕಡೆ ನನಗೆ ಭಾರಿ ಬೆಂಬಲವಿದೆ. ಅರಗಜ್ಞಾನೇಂದ್ರ ಅವರ ಭ್ರಮೆ ಕೊನೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಸುವರ್ಣ ಶಂಕರ್, ಹೇಮಾ, ಶಿವಾಜಿ, ಮಹೇಶ್ ಮೂರ್ತಿ, ಬಾಲು, ದೇವರಾಜ್, ಮಹಾಲಿಂಗಶಾಸ್ತ್ರಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post