ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನನಗೆ ಕ್ಲೀನ್ ಚಿಟ್ ದೊರೆತು ತಿಂಗಳುಗಳೇ ಕಳೆದರೂ ಸಚಿವ ಸ್ಥಾನ ನೀಡದ ಕುರಿತಾಗಿ ನನಗೆ ಅಸಮಾಧಾನ ಇದೆ. ಆದರೆ, ನಾಯಕರ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆಯವರಿಗಿಂತಲೂ ನನ್ನ ಪ್ರಕರಣ ವಿಭಿನ್ನ. ನನ್ನ ವಿರುದ್ಧ ಬಂದಿದ್ದ ಆರೋಪದಲ್ಲಿ ತನಿಖೆ ನಡೆಸಿದ ತನಿಖಾ ಸಂಸ್ಥೆಯೇ ಕ್ಲೀನ್ ಚಿಟ್ ನೀಡಿದೆ. ಹೀಗಿದ್ದು, ನನಗೆ ಮರಳಿ ಸಚಿವ ಸ್ಥಾನ ನೀಡದೇ ಇರುವ ಕುರಿತಾಗಿ ನನಗೆ ಅಸಮಾಧಾನವಿರುವುದು ಸತ್ಯ. ಆದರೂ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧರಾಗಿರುತ್ತೇನೆ ಎಂದರು.
ಕ್ಯಾಬಿನೆಟ್’ನಲ್ಲಿ ಹೆಚ್ಚು ದಿನ ಸ್ಥಾನಗಳಲ್ಲಿ ಖಾಲಿ ಇರಿಸಬಾರದು. ಅಲ್ಲದೇ, ಚುನಾವಣೆಯೂ ಸಹ ಹತ್ತಿರ ಬರುತ್ತಿದೆ. ಹೀಗಾಗಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರುಗಳು ಚರ್ಚಿಸಿ ಸಚಿವ ಸ್ಥಾನಗಳನ್ನು ತುಂಬುವ ಕುರಿತಾಗಿ ನಿರ್ಧಾರ ಕೈಗೊಳ್ಳಬೇಕು ಎಂದರು.
ಯಾವಾಗ ಸಚಿವ ಸ್ಥಾನಕ್ಕೆ ಭರ್ತಿ ಮಾಡುತ್ತಾರೆ, ಸಂಪುಟ ವಿಸ್ತರಣೆ ಆಗುತ್ತದೆಯೋ ಅಥವಾ ಮರು ಹಂಚಿಕೆ ಆಗುತ್ತದೆಯೋ ಎಂಬುದು ಏನೂ ಸಹ ನನಗೆ ತಿಳಿದಿಲ್ಲ. ಈ ಕುರಿತಾಗಿ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post