ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುರುಬ ಸಮಾಜವನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ಅವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂದು ಹೇಳುತ್ತಿದ್ದಾರೆ ವಿನಹ ಯಾರದೋ ಹೆದರಿಕೆಗೆ ಅದನ್ನು ಅವರು ಸ್ಪಷ್ಟಪಡಿಸುತ್ತಿಲ್ಲ. ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಉಗ್ರಪ್ಪ ಮತ್ತು ಮುಖ್ಯಮಂತ್ರಿಗಳ ನಡುವೆ ಒಂದು ರೀತಿಯ ವಾಕ್ ಸಮರವೇ ಆಗಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉಗ್ರಪ್ಪ ಅವರಿಗೆ ಸ್ಪಷ್ಟವಾಗಿ ಹೇಳುವುದನ್ನು ಬಿಟ್ಟು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಚಾರದ ಬಗ್ಗೆ ನಾನು ಹೋರಾಟ ಮಾಡಿದ್ದಲ್ಲ, ಅದು ಕೆ.ಎಸ್. ಈಶ್ವರಪ್ಪ ಅವರು ಮಾಡಿದ್ದರು ಎಂದಿದ್ದಾರೆ ಎಂದರು.
ಮುಖ್ಯಮಂತ್ರಿಯ ಈ ಹೇಳಿಕೆಗೆ ನಾನು ಬದ್ಧನಿದ್ದೇನೆ. ಅವರು ಸತ್ಯವನ್ನೇ ಹೇಳಿದ್ದಾರೆ. ನಾನು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಹೋರಾಟವನ್ನು ಆರಂಭಿಸಿದ್ದೆ. ಕಾಗಿನೆಲೆ ಶ್ರೀಗಳಾದ ನಿರಂಜನಾನಂದಪುರಿ ನೇತೃತ್ವದಲ್ಲಿ ದೆಹಲಿಗೂ ನಿಯೋಗವನ್ನು ಕರೆದುಕೊಂಡು ಹೋಗಿದ್ದೆವು. ಆ ಸಂದರ್ಭದಲ್ಲಿ ಒಂದು ಸಮಿತಿಯನ್ನೂ ರಚಿಸಲಾಗಿತ್ತು. ಆ ಸಮಿತಿಗೆ ನನ್ನ ಪುತ್ರ ಕಾಂತೇಶ್ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಸಮಿತಿಯಲ್ಲಿ ಹೆಚ್.ಎಂ. ರೇವಣ್ಣ, ಭಂಡ್ಯಪ್ಪ ಕಾಶಂಪುರ್ ಸೇರಿದಂತೆ ಕುರುಬ ಸಮಾಜದ ಸಂಘಟನೆಗಳು ಕಾಗಿನೆಲೆಯಿಂದ ಬೆಂಗಳೂರುವರೆಗೆ 350 ಕಿ.ಮೀ. ಪಾದಯಾತ್ರೆ ಮಾಡಿದ್ದೆವು. ಬೆಂಗಳೂರಿನಲ್ಲಿ 10 ಲಕ್ಷ ಜನ ಸೇರಿದ್ದರು. ಈ ಸಮಾವೇಶಕ್ಕೆ ಸಿದ್ಧರಾಮಯ್ಯ ಬಂದಿರಲಿಲ್ಲ. ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಪುಟ ಸಭೆಯಲ್ಲಿ ಇದನ್ನು ಅಂಗೀಕರಿಸಿ, ಆದೇಶ ಹೊರಡಿಸಿದ್ದರು ಎಂದರು.
ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬುದು ಈಗಲೂ ನನ್ನ ಅಭಿಪ್ರಾಯವಾಗಿದೆ. ಆದರೆ ಇದರಿಂದ ಬೇರೆ ಯಾವುದೇ ಸಮಾಜದವರಿಗೆ ತೊಂದರೆಯಾಗಬಾರದು. ಬೇಕಾದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಮುಖ್ಯವಾಗಿ ವಾಲ್ಮೀಕಿ ಸಮಾಜದವರಿಗೆ ತೊಂದರೆಯಾಗಬಾರದು. ಎಲ್ಲಾ ಹಿಂದುಳಿದ ಜಾತಿಗಳಿಗೂ ನೋವಾಗದಂತೆ ಮೀಸಲಾತಿಯನ್ನು ಕಲ್ಪಿಸಬೇಕಾದುದು ರಾಜ್ಯ ಸರ್ಕಾರದ ಹೊಣೆ ಎಂದರು.
ಗೋವರ್ಧನಾ ಟ್ರಸ್ಟ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗೋಪ್ರೇಮಿಗಳ ಬಹುದಿನದ ಕನಸ್ಸು ಈಡೇರಿದಂತ್ತಾಗಿದೆ. ಸುಮಾರು 4000 ಕ್ಕೂ ಹೆಚ್ಚು ಗೋಪ್ರೇಮಿಗಳು ಸ್ವಯಂ ಪ್ರೇರಿತರಾಗಿ ಪ್ರತಿ ತಿಂಗಳು 100 ರೂ. ವಂತಿಕೆ ನೀಡಲು ಒಪ್ಪಿದ್ದಾರೆ. ಶೃಂಗೇರಿ ಶ್ರೀಗಳು ಟ್ರಸ್ಟಿಗೆ 3 ಲಕ್ಷ ರೂ. ನೀಡಿದ್ದಾರೆ. ಹಾಗೆಯೇ ಹುಂಬುಜ ಕ್ಷೇತ್ರದ ಶ್ರೀಗಳು 2ಲಕ್ಷ ರೂ. ನೀಡಿದ್ದಾರೆ. ಅಲ್ಲದೇ ಲಕ್ಷ್ಮೀ ಮೋಹನ್‍ಕುಮಾರ್, ಕವಿತಾ, ಮಹಾವೀರ ಟ್ರಸ್ಟ್, ತಿಮ್ಮೇಗೌಡರು, ರಘುಕುಮಾರ್ ತಲಾ ಒಂದು ಲಕ್ಷ ನೀಡಿದ್ದಾರೆ. ಹೋಟೆಲ್ ಅಶೋಕ ಗ್ರ್ಯಾಂಡ್ ಚಂದ್ರನಾಯಕ್ ತಲಾ 50 ಸಾವಿರ ರೂ. ನೀಡಿದ್ದಾರೆ. ಇವರೆಲ್ಲರಿಗೂ ಟ್ರಸ್ಟ್ ವತಿಯಿಂದ ಧನ್ಯಾವಾದಗಳು ಎಂದರು.
ದೇಣಿಗೆ ನೀಡುವವರು, 98861773111, 9448131575, 9964586181ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಈ .ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಉಮೇಶ್ ಆರಾಧ್ಯಾ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post