ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #Geetha Shivarajkumar ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ #Ayanuru Manjunath ಹೇಳಿದರು.
ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಮತ ಚಲಾವಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಕುಟುಂಬದವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇವೆ. ಎಲ್ಲೆಡೆ ಒಳ್ಳೆಯ ವಾತಾವರಣವಿದೆ. ನಮ್ಮ ಅಭ್ಯರ್ಥಿಯ ಗೆಲುವು ಸನಿಹದಲ್ಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ #Lok Sabhae Election ಕೆ.ಎಸ್. ಈಶ್ವರಪ್ಪನವರು #K S Eshwarappa ಚುನಾವಣೆಯಲ್ಲಿ ನಿಜವಾಗಿಯು ಸ್ಪರ್ಧೆ ಮಾಡಿದರೆ ನನ್ನ ಮತ ಅವರಿಗೆ ಹಾಕುತ್ತೇನೆ ಎಂದು ಈ ಹಿಂದೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆಯನೂರು ಮಂಜುನಾಥ್, ನಾನು ಮಾತುಕೊಟ್ಟಂತೆ ಈಶ್ವರಪ್ಪನವರಿಗೆ ಮತಹಾಕಬೇಕು ಎಂದುಕೊಂಡಿದ್ದೆ. ಆದರೆ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ನೋಡಿದ ಮೇಲೆ ಅವರಿಗೆ ಮತ ಹಾಕುವುದು ಬೇಡ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ್ದೇನೆ ಎಂದರು.
ಆನಂತರ ಗೊತ್ತಾಯ್ತು ಅದು ಫೇಕ್ ವಿಡಿಯೋ ಎಂದು. ನನ್ನ ಮತವನ್ನು ಪಡೆಯುವ ಅದೃಷ್ಟ ಈಶ್ವರಪ್ಪನವರಿಗೆ ಇರಲಿಲ್ಲ ಎಂದು ಮಂಜುನಾಥ್ ತಮ್ಮದೇ ಆದ ಶೈಲಿಯಲ್ಲಿ ಚಟಾಕಿ ಹಾರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post