ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅನೇಕ ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿ ಹಿಂದೂಗಳನ್ನು ಅಪಮಾನ ಮಾಡಿರುವುದನ್ನು ನೂರಾರು ವರ್ಷಗಳಿಂದ ಸಹಿಸಿಕೊಳ್ಳಲಾಗಿದೆ. ಆದರೆ, ಕನ್ಹಯ್ಯಾ ಲಾಲ್ ಕಗ್ಗೊಲೆ ಇಡೀ ಹಿಂದೂ ಸಮಾಜಕ್ಕೆ ಒಂದು ಸವಾಲಾಗಿದ್ದು, ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಶಾಸಕ ಈಶ್ವರಪ್ಪ MLA Eshwarappa ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 33,000 ಹಿಂದೂ ದೇವಾಲಯಗಳನ್ನು ಒಡೆದು ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವುದು ಇತಿಹಾಸದಲ್ಲಿದೆ. ಅಯೋಧ್ಯೆ, ಮಥುರಾ ಮತ್ತು ಕಾಶಿ ಈ ಮೂರು ದೇವಾಲಯಗಳನ್ನು ಮುಸಲ್ಮಾನರು ಅವಮಾನಿಸಿರುವುದನ್ನು ತಾವು ನೋಡಿದ್ದೇವೆ. ಇದನ್ನು ಹಿಂದೂ ಸಮಾಜ ಇನ್ನು ಸಹಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಇಡೀ ಹಿಂದೂ ಸಮಾಜ ತಮಗಾದ ಅಪಮಾನವನ್ನು ಸಹಿಸಿಕೊಂಡು ಶಾಂತಿಯಿಂದ ಇರುವ ಸಂದರ್ಭದಲ್ಲಿ, ನೂಪುರ್ ಶರ್ಮಾ ಅವರು ಪೈಗಂಬರ್ ಬಗೆಗಿನ ಹೇಳಿಕೆಯನ್ನು ಆಧರಿಸಿ ಪ್ರಪಂಚದ ಮುಸಲ್ಮಾನ ದೇಶಗಳು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿತು. ರಾಜಸ್ಥಾನದ ಒಬ್ಬ ಸಾಮಾನ್ಯ ಹಿಂದೂ ದರ್ಜಿಯ ಕಗ್ಗೊಲೆ ಮಾಡಿರುವುದಲ್ಲೆ ಅದೇ ಮಾರಕಾಸ್ತ್ರದಲ್ಲಿ ದೇಶದ ಪ್ರಧಾನ ಮಂತ್ರಿಯನ್ನು ಕೊಲ್ಲುತ್ತೇವೆ ಎಂಬ ಮಾತು ಇಡೀ ದೇಶದ ಹಿಂದೂಗಳಿಗೆ ಅಪಮಾನ ಮತ್ತು ಸವಾಲಾಗಿದೆ ಎಂದರು.
Also read: ಜೆಎನ್‌ಎನ್‌ಇ ಕಾಲೇಜಿನಲ್ಲಿ ಮಲೆನಾಡಿನ ವೈಭವದ ಪರಂಪರೆ ಅನಾವರಣ…
ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಶಾಂತಿಯನ್ನು ಕಾಪಾಡುವ ಮಾತುಗಳನ್ನಾಡುತ್ತಿದ್ದಾರೆ. ಮುಸಲ್ಮಾನರ ಈ ರಾಷ್ಟ್ರದ್ರೋಹಿ ಚುಟುವಟಿಕೆಗಳ ಬಗೆಗಿನ ಕಾನೂನು ಕ್ರಮಗಳ ಬಗ್ಗೆ ಯಾರೂ ಒಂದೂ ಮಾತು ಹೇಳಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಧರ್ಮಕ್ಕೆ ವಿಶೇಷ ಆದ್ಯತೆ ಇಲ್ಲ. ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಎಲ್ಲರೂ ಒಂದೇ. ಸಮಾನ ನಾಗರಿಕ ವ್ಯವಸ್ಥೆ ನಮ್ಮ ದೇಶದ ಆಂತರಿಕ ಹಕ್ಕು ಇದರಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ತಲೆ ಹಾಕು ಅವಶ್ಯಕತೆ ಇಲ್ಲ. ತೀರ್ಮಾನ ನಮ್ಮ ದೇಶದ್ದು ಎಂದು ಹೇಳಿದರು.











Discussion about this post