ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿರುವ ವಿ. ವಿ. ಮಟ್ಟದ ಎನ್. ಎಸ್. ಎಸ್. ಶಿಬಿರದ 4ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು, ತಮ್ಮ ಎನ್ಎಸ್ಎಸ್ ದಿನಗಳನ್ನು ಮೆಲುಕು ಹಾಕಿದರು.
ಮದ್ಯಾಹ್ನದ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯರಾದ ಡಾ. ಎಸ್. ಟಿ. ಅರವಿಂದ್, ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಯುವಕರು ನಕಾರಾತ್ಮಕ ಚಿಂತನೆಗಳಿಂದ ಖಿನ್ನತೆಗೆ ಒಳಗಾಗಿ, ವ್ಯಸನಗಳ ದಾಸರಗುತ್ತಿದ್ದಾರೆ. ಸಾಧನೆಯ ಹಾದಿಯಲ್ಲಿ ಸೋಲು, ಅವಮಾನ, ತಿರಸ್ಕಾರ, ಟೀಕೆಗಳು ಸಹಜ. ಆದರೆಅವುಗಳನ್ನೇ ಮೆಟ್ಟಿಲುಗಳನ್ನಾಗಿಸಿ ಕೊಂಡು ಯಶಸ್ಸಿನ ಶಿಖರ ಎರಬೇಕು ಎಂದರು.
ನಂತರ ಶಿಬಿರಾರ್ಥಿಗಳಿಂದ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಡಾ. ನಾಗರಾಜ್ ಪರಿಸರ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಎನ್.ಎಸ್. ಎಸ್. ಕುವೆಂಪು ವಿ. ವಿ. ಇವರು ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಕಾಶ್ ಮರ್ಗನಳ್ಳೀ, ಡಾ. ಹಾಲಮ್ಮ, ಡಾ. ಶುಭ ಮರವಂತೆ, ಡಾ. ಗಣೇಶ್ ಆರ್. ಕೆಂಚನಾಲ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post