ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲ್ಲಿಗೇನ ಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ 200 ಮನೆ ತೆರವಿಗೆ ಮುಂದಾದ ಇಲಾಖೆಯ ಜೆಸಿಬಿಗೆ ಸ್ಥಳೀಯರು ಅಡ್ಡಲಾಗಿ ಮಲಗಿ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಅಡ್ಡಬಂದವರನ್ನು ವಶಕ್ಕೆ ಪಡೆದು ಕಾರ್ಯಚಾರಣೆ ಮುಂದುವರೆಸಲಾಯಿತು.
ಮಲ್ಲಿಗೇನ ಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಅಪ್ಪರ್ ತುಂಗ ಜಾಗದಲ್ಲಿ ಇಲ್ಲಿನ ಹಕ್ಲಿಪಿಕ್ಕಿ ಜನ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ಅವರವಾಗಿ ತೆರವುಗೊಳಿಸಲು ಯುಟಿಪಿ ಇಲಾಖೆ ಅನೇಕ ಬಾರಿ ನೋಟೀಸ್ ನೀಡಿದ್ದರೂ, ಉತ್ತರ ನೀಡಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇವೇಳೆ ಜಗ್ಗು ಎಂಬುವವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದರು.
ನಮ್ಮ ಹೆಣಗಳ ಮೇಲೆ ತೆರವು ಕಾರ್ಯಾಚರಣೆ ನಡೆಸಿ, ಸರ್ಕಾರದಿಂದ ಯಾವ ಅನುಕೂಲವಿಲ್ಲ. ತೆರವುಗೊಳಿಸಲು ಅನುಮತಿ ನೀಡಿದ ಸರ್ಕಾರವನ್ನೇ ನಮ್ಮ ಬಳಿ ಕಳುಹಿಸಿ, ಇಲ್ಲವೆಂದರೆ ಶಿಕಾರಿಗೆ ಅನುಮತಿ ನೀಡಿ ಎಂದು ಸ್ಥಳೀಯರು ಭಾರಿ ಬಿರೋಧ ವ್ಯಕ್ತಪಡಿಸಿದರು.
Also read: ಮಡಿಕೇರಿಯಲ್ಲಿ ಅ.21ರಂದು ಉದ್ಯೋಗ ಮೇಳ: ಯಾವ್ಯಾವ ಕಂಪೆನಿಗಳು ಇರಲಿವೆ? ಇಲ್ಲಿದೆ ಮಾಹಿತಿ
ಸ್ಥಳಕ್ಕೆ ಯುಟಿಪಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಇ. ಸುರೇಶ, ಎಡ್ಲು ಇ ತುಪ್ಪಾನಾಯ್ಕ್, ಪ್ರವೀಣ್ ರವಿಕುಮಾರ್, ಎಇ ಶಂಕ್ರಪ್ಪ, ವೀರಪ್ಪ, ತುಂಗ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post